ಕಂಪ್ಲಿ: ವಿವಿಧೆಡೆ ಬೈಕ್‍ಗಳನ್ನು ಕಳವು ಮಾಡಿದ ಆರೋಪಿಗಳಾದ ದಿನೇಶ್ ಮತ್ತು ಯಶ್ವಂತ್ ಅವರನ್ನು ಇಲ್ಲಿಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಈ ಇಬ್ಬರು ಆರೋಪಿಗಳೊಂದಿಗೆ ಪಟ್ಟಣದ ಎಲ್.ಜಿ. ಕಾರ್ತಿಕ್, ಕೃಷ್ಣ, ಮೆಟ್ರಿ ಬಾಷ ಸೇರಿ ಕಳೆದ 1ವರ್ಷದಿಂದ ಕಂಪ್ಲಿ, ಕೊಪ್ಪಳ ಜಿಲ್ಲೆ ಅಂಜನಾದ್ರಿ ಬೆಟ್ಟ, ತುಮಕೂರು ಮತ್ತು ಚಿತ್ರದುರ್ಗ ಬಸ್ ನಿಲ್ದಾಣ, ದಮ್ಮೂರು ಗ್ರಾಮ ಸಿಂಧನೂರು ಅಂಬಾಮಠ, ತೋರಣಗಲ್, ಮುನಿರಾಬಾದ್ ರೈಲ್ವೆ ಸ್ಟೇಷನ್, ಆಂಧ್ರಪ್ರದೇಶದ ವಿಡಪನಕಲ್‍ನಲ್ಲಿ 11ಬೈಕ್‍ಗಳನ್ನು ಕಳವು ಮಾಡಿದ್ದು, ಅವುಗಳ ಮೌಲ್ಯ ₹9ಲಕ್ಷ ಎನ್ನಲಾಗಿದೆ.
ನಂ.76 ವೆಂಕಟಾಪುರ ಗ್ರಾಮದ ಮಾರತೇಶ ಎಂಬುವವರು ತಮ್ಮ ಬೈಕ್ ಕಳವು ಆಗಿರುವ ಕುರಿತು ಇಲ್ಲಿಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪಟ್ಟಣದ ಕುರುಗೋಡು ರಸ್ತೆಯ ಕಮ್ಮವಾರಿ ಭವನದ ಬಳಿ ಗುರುವಾರ ವಾಹನಗಳ ತಪಾಸಣೆ ನಡೆಸುತ್ತಿರುವಾಗ ಈ ಆರೋಪಿಗಳು ಸೆರೆಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್‍ಕುಮಾರ್, ಡಿಎಸ್‍ಪಿ ಪ್ರಸಾದ್ ಗೋಖಲೆ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಐ ಕೆ.ಬಿ. ವಾಸುಕುಮಾರ್, ಪಿಎಸ್‍ಐ ಅವಿನಾಶ್ ಕಾಂಬ್ಳೆ, ಎಎಸ್‍ಐ ಬಿ. ಬಸವರಾಜ, ಹೆಡ್ ಕಾನ್‍ಸ್ಟೇಬಲ್ ಬಸವರಾಜ ಹಿರೇಮಠ, ಪೊಲೀಸ್ ಕಾನ್‍ಸ್ಟೇಬಲ್‍ಗಳಾದ ಸತ್ಯನಾರಾಯಣ, ಮಲ್ಲೇಶ್ ರಾಠೋಡ್, ಮುತ್ತುರಾಜ, ಸುರೇಶ್, ಟಿ.ಶರಣಪ್ಪ, ತಿಮ್ಮಯ್ಯ, ಪ್ರಭಾಕರ, ಗಾದಿಲಿಂಗಪ್ಪ, ವಿಶ್ವನಾಥ, ಸುದರ್ಶನ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು. ಸಿಬ್ಬಂದಿ ಸೇವೆಯನ್ನು ಶ್ಲಾಘಿಸಿರುವ ಎಸ್.ಪಿ ಅವರು ಬಹುಮಾನ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.