ADVERTISEMENT

ಪಾದಗಟ್ಟೆ ಹುಂಡಿಯಲ್ಲಿ ₹ 11.28 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:23 IST
Last Updated 1 ಡಿಸೆಂಬರ್ 2025, 4:23 IST
 ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಪಾದಗಟ್ಟೆ ದೇವಸ್ಥಾನದ ಬಳಿ ಹುಂಡಿ ಎಣಿಕೆ ಜರುಗಿತು.
 ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಪಾದಗಟ್ಟೆ ದೇವಸ್ಥಾನದ ಬಳಿ ಹುಂಡಿ ಎಣಿಕೆ ಜರುಗಿತು.   

ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಪಾದಗಟ್ಟೆ ಸಮೀಪದ ಉಚ್ಚಂಗೆಮ್ಮ ದೇವಿ ಹುಂಡಿ ಹಾಗೂ ಹಾಲಮ್ಮನ ತೋಪಿನಲ್ಲಿರುವ ದೇವಿಯ ಹುಂಡಿ ಎಣಿಕೆ ಕಾರ್ಯ ಭಾನುವಾರ ಜರುಗಿತು.

ಪಾದಗಟ್ಟೆ ಬಳಿ ಹುಂಡಿಯಲ್ಲಿ ರೂ. 5,02,601 ಹಾಗೂ ಹಾಲಮ್ಮನ ತೋಪಿನ ಹುಂಡಿಯಲ್ಲಿ ರೂ. 6,26,070 ಒಟ್ಟು ₹ 11,28,671 ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಹಾಯಕ ಆಯುಕ್ತೆ ಎಚ್.ಸವಿತಾ ತಿಳಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾವತಿ, ಸಲಹಾ ಸಮಿತಿ ಸದಸ್ಯರಾದ ಜಯಣ್ಣ, ಉಪಾಧ್ಯಕ್ಷೆ ಮಡ್ರಳ್ಳಿ ಕೆಂಚಪ್ಪ, ಗಂಗಾಧರ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT