ADVERTISEMENT

ಹರಪನಹಳ್ಳಿ: ಮನೆಗೆ ನೀರು ನುಗ್ಗುವುದನ್ನು ತಪ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:36 IST
Last Updated 21 ಮೇ 2025, 13:36 IST
ಹರಪನಹಳ್ಳಿ ತಾಲ್ಲೂಕು ಯರಬಾಳು ಗ್ರಾಮದಲ್ಲಿ ದಲಿತರ ಕಾಲೊನಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಹರಪನಹಳ್ಳಿ ತಾಲ್ಲೂಕು ಯರಬಾಳು ಗ್ರಾಮದಲ್ಲಿ ದಲಿತರ ಕಾಲೊನಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು   

ಹರಪನಹಳ್ಳಿ: ತಾಲ್ಲೂಕಿನ ಯರಬಾಳು ಗ್ರಾಮದ ಮಾದಿಗರ ಕೇರಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ.

ಈ ಪ್ರದೇಶದಲ್ಲಿ ಪರಿಶಿಷ್ಟ ಸಮುದಾಯದವರೇ ಹೆಚ್ಚಾಗಿ ವಾಸವಿದ್ದು, ಮಳೆ ನೀರಿನ ಗುಂಡಿಗಳು ನಿರ್ಮಾಣವಾಗಿವೆ. ಈ ನೀರು ಮನೆಗಳಿಗೆ ನುಗ್ಗಿತಿದೆ. ನೀರನ್ನು ಹೊರಗೆ ಸಾಗಿಸಲು ನಿಟ್ಟೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಪರಿಣಾಮ ಸೊಳ್ಳೆಗಳ ಕಾಟದಿಂದ ಜನರು ಭೀತಿಯಲ್ಲಿದ್ದಾರೆ. ವಾಸ ಮಾಡುವಂಥ ಮಾದಿಗ ಜನಾಂಗಕ್ಕೆ ತುಂಬಾ ತೊಂದರೆಯಾಗುತ್ತಿದ್ದರು ಗ್ರಾಮ ಪಂಚಾಯತಿಯವರಾಗಲಿ ಗ್ರಾಮ ಆಡಳಿತದ ಯಾವುದೇ ಅಧಿಕಾರಿಗಳಾಗಲಿ ವೀಕ್ಷಣೆಗೆ ಬಂದಿಲ್ಲ. ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು.

ದಲಿತ ಕಾಲೊನಿ ನಿವಾಸಿಗಳು, ಯರಬಾಳು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.