ಹೂವಿನಹಡಗಲಿ: ತಾಲ್ಲೂಕಿನ ದಾಸನಹಳ್ಳಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಬೇಕು ಎಂದು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಶಿವಮೂರ್ತಿ, ಎಇಇ ರಾಜು ಅವರಿಗೆ ರೈತರು ಮನವಿ ಸಲ್ಲಿಸಿದ್ದಾರೆ.
ತುಂಗಭದ್ರಾ ನದಿಯಿಂದ ತಾಲ್ಲೂಕಿನ ಪ್ರಮುಖ ಕೆರೆ ತುಂಬಿಸುವ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದರೂ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಯೋಜನೆ ಕಾರ್ಯಗತಗೊಂಡು ದಶಕ ಕಳೆದರೂ ದಾಸನಹಳ್ಳಿ ಕೆರೆಗೆ ಸಮರ್ಪಕ ನೀರು ಹರಿದಿಲ್ಲ. ತಾಂತ್ರಿಕ ದೋಷ ಸರಿಪಡಿಸಿ ಈ ವರ್ಷ ಪೂರ್ಣಪ್ರಮಾಣದಲ್ಲಿ ಕೆರೆ ತುಂಬಿಸಬೇಕು ಎಂದು ರೈತರು ಒತ್ತಾಯಿಸಿದರು.
ಮುಖಂಡರಾದ ಕೋಡಬಾಳ ಚಂದ್ರಪ್ಪ, ಎನ್.ವೀರಣ್ಣ, ಎಂ.ಕುರುವತ್ತೆಪ್ಪ, ಜಿ.ಬಸಪ್ಪ , ಬಿ.ಸುಭಾಸ್, ಎಚ್.ಶಿವಕುಮಾರ, ಬಿ.ತಾರಕೇಶ, ಕೆ.ಶಿವು, ಸಿದ್ದಲಿಂಗಸ್ವಾಮಿ, ಕೆ.ಕಾಂತೇಶ, ಕೆ.ಸತೀಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.