ADVERTISEMENT

ಹೊಸಪೇಟೆ: ಉಷಾಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 7:00 IST
Last Updated 22 ಜುಲೈ 2019, 7:00 IST
ಕಂಚಿನ ಪದಕದೊಂದಿಗೆ ಉಷಾ
ಕಂಚಿನ ಪದಕದೊಂದಿಗೆ ಉಷಾ   

ಹೊಸಪೇಟೆ: ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪವರ್‌ ಲಿಫ್ಟಿಂಗ್‌ 47 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ನಗರದ ಉಷಾ ರೋಹಿಣಿ ಅವರು ಕಂಚಿನ ಪದ ಜಯಿಸಿದ್ದಾರೆ.

ಉಷಾ ಅವರು ಒಟ್ಟು 187.5 ಕೆ.ಜಿ. ಭಾರ ಎತ್ತಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ತರಬೇತುದಾರ ವಲಿಬಾಷಾ ಮಾರ್ಗದರ್ಶನದಲ್ಲಿ ಉಷಾ ಸಿದ್ಧತೆ ನಡೆಸಿ, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಉಷಾ ಅಥ್ಲೀಟ್‌ ಕೂಡ ಹೌದು. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT