ADVERTISEMENT

ಸಂಭ್ರಮದ ವರಮಹಾಲಕ್ಷ್ಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 13:36 IST
Last Updated 9 ಆಗಸ್ಟ್ 2019, 13:36 IST
ಹೊಸಪೇಟೆಯ ಉಕ್ಕಡಕೇರಿಯಲ್ಲಿ ಮಹಿಳೆಯರು ಶುಕ್ರವಾರ ವರಮಹಾಲಕ್ಷ್ಮಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಿದರು
ಹೊಸಪೇಟೆಯ ಉಕ್ಕಡಕೇರಿಯಲ್ಲಿ ಮಹಿಳೆಯರು ಶುಕ್ರವಾರ ವರಮಹಾಲಕ್ಷ್ಮಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಿದರು   

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ, ಭಕ್ತಿಯಿಂದ ಜನ ಮಾಡಿದರು.

ಮನೆಗಳಲ್ಲಿ ಕಬ್ಬು, ಬಾಳೆ ದಿಂಡು, ಹೂಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿ, ಅದರಲ್ಲಿ ಮಹಾಲಕ್ಷ್ಮಿ ಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿ, ಆರತಿ ಬೆಳಗಿದರು. ಬಳಿಕ ನೈವೇದ್ಯ ಸಮರ್ಪಿಸಿದರು.

ಹಬ್ಬದ ನಿಮಿತ್ತ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂತು. ಮಹಿಳೆಯರು ಬೆಳಿಗ್ಗೆಯೇ ಮನೆ ಎದುರು ರಂಗೋಲಿ ಹಾಕಿ, ತೋರಣ ಕಟ್ಟಿದರು. ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಸುತ್ತಮುತ್ತಲಿನ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಪೂಜೆ ಮಾಡಿದರು. ಬಳಿಕ ಊಟ, ಉಪಾಚಾರಕ್ಕೆ ವ್ಯವಸ್ಥೆ ಮಾಡಿದರು.

ADVERTISEMENT

ಸಂಜೆ ಮಹಿಳೆಯರು ಮನೆ ಮನೆಗೆ ಹೋಗಿ ಹೂ, ಹಣ್ಣು, ಅರಿಶಿಣ ಕುಂಕುಮ ಕೊಡುತ್ತಿರುವ ದೃಶ್ಯ ಕಂಡು ಬಂತು. ಜನ ದೇವಸ್ಥಾನಗಳಿಗೂ ಹೋಗಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.