ADVERTISEMENT

ಹೊಸಪೇಟೆ: ವರ್ಣರಂಜಿತ ವಿಜಯನಗರ ಉತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 16:39 IST
Last Updated 3 ಅಕ್ಟೋಬರ್ 2021, 16:39 IST
ಹೊಸಪೇಟೆಯಲ್ಲಿ ಭಾನುವಾರ ರಾತ್ರಿ ನಡೆದ ವಿಜಯನಗರ ಜಿಲ್ಲಾ ಉತ್ಸವದಲ್ಲಿ ಖ್ಯಾತ ಚಲನಚಿತ್ರ ಗೀತೆ ಗಾಯಕ ವಿಜಯ್‌ ಪ್ರಕಾಶ್‌ ಅವರು ಸಂಗೀತ ರಸಮಂಜರಿ ನಡೆಸಿಕೊಟ್ಟ ರಸಕ್ಷಣಗಳು...ಚಿತ್ರ: ಲವ
ಹೊಸಪೇಟೆಯಲ್ಲಿ ಭಾನುವಾರ ರಾತ್ರಿ ನಡೆದ ವಿಜಯನಗರ ಜಿಲ್ಲಾ ಉತ್ಸವದಲ್ಲಿ ಖ್ಯಾತ ಚಲನಚಿತ್ರ ಗೀತೆ ಗಾಯಕ ವಿಜಯ್‌ ಪ್ರಕಾಶ್‌ ಅವರು ಸಂಗೀತ ರಸಮಂಜರಿ ನಡೆಸಿಕೊಟ್ಟ ರಸಕ್ಷಣಗಳು...ಚಿತ್ರ: ಲವ   

ಹೊಸಪೇಟೆ (ವಿಜಯನಗರ): ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ, ಕಿವಿಗಡಚ್ಚಿಕ್ಕುವ ಸಂಗೀತ, ಎಲ್ಲೆಡೆ ವಿದ್ಯುತ್‌ ದೀಪಗಳ ಹೊನಲು, ಖ್ಯಾತ ಗಾಯಕರ ಹಾಡಿಗೆ ಕುಣಿದು ಕುಪ್ಪಳಿಸಿದ ಜನ, ತಡರಾತ್ರಿ ವರೆಗೆ ಕಾರ್ಯಕ್ರಮ ಕಣ್ತುಂಬಿಕೊಂಡ ಮಂದಿ...

ವಿಜಯನಗರ ಜಿಲ್ಲಾ ಉತ್ಸವದ ಎರಡನೇ ದಿನವಾದ ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಂಡು ಬಂದ ದೃಶ್ಯಗಳಿವು. ಒಂದುವರೆ ವರ್ಷದಿಂದ ಮನೆಯಲ್ಲೇ ಕುಳಿತು ಬೇಸತ್ತಿದ್ದ ಜನತೆಗೆ ಎರಡು ದಿನಗಳ ಕಾರ್ಯಕ್ರಮ ಮುದ ನೀಡಿತು. ಮತ್ತೆ ಅವರಲ್ಲಿ ಹೊಸ ಚೈತನ್ಯ ತುಂಬಿದ ವರ್ಣರಂಜಿತ ಕಾರ್ಯಕ್ರಮವು ಭಾನುವಾರ ತಡರಾತ್ರಿ ವಿಧ್ಯುಕ್ತ ತೆರೆ ಕಂಡಿತು.

ಇದಕ್ಕೂ ಮುನ್ನ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು, ‘ನಾನೇ ರಾಜಕುಮಾರ್‌, ಬೊಂಬೆ ಹೇಳುತೈತೆ, ನೀನೇ ರಾಜಕುಮಾರ್‌’ ಎಂಬ ಗೀತೆಯೊಂದಿಗೆ ವೇದಿಕೆ ಮೇಲೆ ಕಾಣಿಸಿಕೊಂಡಾಗ ಕರತಾಡನ ಮುಗಿಲು ಮುಟ್ಟಿತ್ತು. ಬಳಿಕ ‘ಕರ್ನಾಟಕದ ಇತಿಹಾಸದಲ್ಲಿ’ ಗೀತೆ ಹಾಡಲು ಶುರು ಮಾಡಿದಾಗ ಜನ ಹುಚ್ಚೆದ್ದು ಕುಣಿದರು. ನಂತರ ‘ಓಂ ಶಿವಾಯ’ ಗೀತೆ ಹಾಡಿ ಭಕ್ತಿಯಲ್ಲಿ ತೇಲುವಂತೆ ಮಾಡಿದರು.

ADVERTISEMENT

ಇದಕ್ಕೂ ಮುನ್ನ ಗಾಯಕಿಯರಾದ ಅನುರಾಧಾ ಭಟ್‌, ಶಮಿತಾ ಮಲ್ನಾಡ್‌ ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ತಡರಾತ್ರಿ ಸಿಡಿಮದ್ದು ಸುಡುವ ಕಾರ್ಯಕ್ರಮದೊಂದಿಗೆ ತೆರೆ ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.