
ತೆಕ್ಕಲಕೋಟೆ: ಸಮೀಪದ ಉಪ್ಪಾರಹೊಸಹಳ್ಳಿ ಗ್ರಾಮದ ಕೆರೆಗೆ ಬಾಗೇವಾಡಿ ಉಪಕಾಲುವೆ ಮೂಲಕ ನೀರನ್ನು ತುಂಬಿಸುವ ಕಾರ್ಯ ಭರದಿಂದ ಸಾಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಧ್ಯಕ್ಷರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಈ ಕೆರೆಯಿಂದ ಉಪ್ಪಾರಹೊಸಳ್ಳಿ, ಬಲಕುಂದಿ, ಮೈಲಾಪುರ ಗ್ರಾಮದಲ್ಲಿರುವ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಬೂದುಗುಪ್ಪ ಗ್ರಾಮದ ಕೆರೆಯನ್ನು ಸಹ ತುಂಬಿಸುವ ಕಾರ್ಯ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ಈ ಕೆರೆ ತುಂಬಿದ ನಂತರ ಮೈಲಾಪುರ ಗ್ರಾಮದ ಕೆರೆಯನ್ನು ಎರಡು ದಿನಗಳ ಒಳಗಾಗಿ ತುಂಬಿಸಲಾಗುವುದು ಎಂದು ಬಲಕುಂದಿ ಪಿಡಿಒ ವೀರಪ್ಪ ತಿಳಿಸಿದ್ದಾರೆ.
ಈ ಕುರಿತಂತೆ ‘ಪ್ರಜಾವಾಣಿ’ ಮಾರ್ಚ್ 22 ರಂದು ‘ಖಾಲಿಯಾಗುತ್ತಿರುವ ಕೆರೆಗಳು: ನೀರಿನ ಬವಣೆ ಮತ್ತಷ್ಟು ತೀವ್ರ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ಬಾರಿ ಕೆರೆ ತುಂಬಿದಲ್ಲಿ 3-4 ತಿಂಗಳು ಜನರಿಗೆ ಪೂರೈಕೆ ಮಾಡಲು ಸಾಧ್ಯವಿದೆ. ಸಾರ್ವಜನಿಕರು ನೀರಿನ ಸಮಸ್ಯೆ ಇರುವುದರಿಂದ ಹಿತಮಿತವಾಗಿ ಬಳಸಬೇಕು-ಬಿ. ಎಂ ಸುನೀತ ರುದ್ರಮುನಿ ಅಧ್ಯಕ್ಷೆ ಗ್ರಾಮ ಪಂಚಾಯಿತಿ ಬಲಕುಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.