ಕಂಪ್ಲಿ: ಪತಿ ಸಾವನ್ನಪ್ಪಿದ ಎರಡೇ ದಿನದಲ್ಲಿ ಪತ್ನಿಯೂ ಕೊನೆಯುಸಿರೆಳೆದ ಘಟನೆ ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದೆ.
ಕಂಪ್ಲಿ ತಾಲ್ಲೂಕು ರಜಪೂತ ಸಮಾಜದ ನಿಕಟಪೂರ್ವ ಅಧ್ಯಕ್ಷ ಜಿ. ಶಂಕರಸಿಂಗ್(68) ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದು, ಸೋಮವಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಇದಾದ ಎರಡು ದಿನದಲ್ಲಿ ಪತಿ ಸಾವಿನ ಅಗಲಿಕೆಯಿಂದ ಅಘಾತಕ್ಕೊಳಗಾಗಿದ್ದ ಅವರ ಪತ್ನಿ ಜಿ. ಶಕುಂತಲಾಬಾಯಿ(56) ಬುಧವಾರ ಸಂಜೆ ಮೃತರಾದರು. ಹಿರಿಯ ಜೀವಿಗಳ ಅಗಲಿಕೆಗೆ ಕುಟಂಬಸ್ಥರಲ್ಲದೆ, ನೆರೆಹೊರೆಯವರೂ ಕಂಬನಿ ಮಿಡಿದಿದ್ದಾರೆ.
ಮೃತರಿಗೆ ಮೂವರು ಪುತ್ರರಿದ್ದು, ಅಂತ್ಯಕ್ರಿಯೆ ಗುರುವಾರ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.