ADVERTISEMENT

‘ನಾಡಿನ ಸಂಸ್ಕೃತಿ ಉಳಿವು ಎಲ್ಲರ ಕರ್ತವ್ಯ’: ರಂಗಣ್ಣವರ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 4:23 IST
Last Updated 2 ಜನವರಿ 2022, 4:23 IST
ಬಳ್ಳಾರಿ ಸಾಂಸ್ಕೃತಿ ಸಮುಚ್ಚಯ ಅವರಣದಲ್ಲಿ  ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಯುವ ಸೌರಭದಲ್ಲಿ ಕುಮಾರಿ ಪಿ. ರಷ್ಮಿ ತಂಡವರು ನಡೆಸಿಕೊಟ್ಟ ಸಮೂಹ ನೃತ್ಯ ಗಮನಸೆಳೆಯಿತು
ಬಳ್ಳಾರಿ ಸಾಂಸ್ಕೃತಿ ಸಮುಚ್ಚಯ ಅವರಣದಲ್ಲಿ  ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಯುವ ಸೌರಭದಲ್ಲಿ ಕುಮಾರಿ ಪಿ. ರಷ್ಮಿ ತಂಡವರು ನಡೆಸಿಕೊಟ್ಟ ಸಮೂಹ ನೃತ್ಯ ಗಮನಸೆಳೆಯಿತು   

ಬಳ್ಳಾರಿ: ‘ನಾಡಿನ ಜನಪದ ಕಲೆ, ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಶಾಸಕ ಜಿ. ಸೋಮಶೇಖರರೆಡ್ಡಿ ಹೇಳಿದರು.

ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಯುವ ಸೌರಭ ಉದ್ಘಾಟಿಸಿ, ‘ವಿಶ್ವದಲ್ಲಿಯೇ ಅತ್ಯಂತ ಪ್ರಾಚೀನ ಸಂಸ್ಕೃತಿ ಭಾರತೀಯ ಸಂಸ್ಕೃತಿ’ ಎಂದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗಶ ಕೆ. ರಂಗಣ್ಣವರ್ ಮಾತನಾಡಿದರು.

ADVERTISEMENT

ಹಿಂದೂಸ್ತಾನಿ ಸಂಗೀತ, ಸಮೂಹ ನೃತ್ಯ, ಹಕ್ಕಿಪಿಕ್ಕಿ ನೃತ್ಯ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಲ್ಲನಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಸಿ.ಎನ್. ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.