ADVERTISEMENT

ಆರ್ಥಿಕ ಅಭಿವೃದ್ಧಿಗೆ ಹಾಲು ಉತ್ಪಾದನೆ ಸಹಕಾರಿ

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:16 IST
Last Updated 13 ಡಿಸೆಂಬರ್ 2013, 9:16 IST

ದೇವನಹಳ್ಳಿ: ‘ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವಾಗದ ಕಾರಣ ಬಯಲು ಸೀಮೆಯ ರೈತರ ಬದುಕು ಶೋಚನೀಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.   ತಾಲ್ಲೂಕಿನ ಕೊಯಿರಾ ಗ್ರಾ.ಪಂ ವಾಣಿಜ್ಯ ಸಂಕೀರ್ಣ ಮತ್ತು ದೊಡ್ಡಗೊಲ್ಲಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕ ಸಹಕಾರ ಸಂಘ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಂತ ಕಡಿಮೆ ಮಳೆಯಿಂದಾಗಿ ಬಯಲು ಸೀಮೆಯಲ್ಲಿ ಕೃಷಿ ಚಟುವಟಿಕೆ ಸಕಾಲದಲ್ಲಿ ನಡೆಯುತ್ತಿಲ್ಲ . ಅಲ್ಲದೆ ಉತ್ಪಾದನೆಯು ಕುಂಠಿತವಾಗುತ್ತಿದೆ. ಹಾಗಾಗಿ ಕುಟುಂಬದ ಆರ್ಥಿಕ ಶಕ್ತಿ ಸರಿದೂಗಿಸಲು ಹಾಲು ಉತ್ಪಾದನೆ ಅನಿವಾರ್ಯವಾಗಿದೆ.   ಬಯಲು ಸೀಮೆಯಲ್ಲಿ ಅತ್ಯಂತ ಕಡಿಮೆ ಮಳೆಯಿಂದಾಗಿ ಕೃಷಿ ಚಟುವಟಿಕೆ ಸಕಾಲದಲ್ಲಿ ನಡೆಯುತ್ತಿಲ್ಲ ಉತ್ಪಾದನೆಯು ಕುಂದಿತವಾಗುತ್ತಿದೆ. ಆದರೆ ಕುಟುಂಬದ ಆರ್ಥಿಕ ಶಕ್ತಿ ಸರಿದೂಗಿಸಲು ಹಾಲು ಉತ್ಪಾದನೆ ಅನಿವಾರ್ಯವಾಗಿದೆ.

ರಾಜ್ಯದಲ್ಲಿ ವಿವಿಧ ಖಾಸಗಿ ಹಾಲು ಉತ್ಪಾದನಾ ಕಂಪೆನಿಗಳು ಮತ್ತು ಉತ್ಪಾದಕರ  ನಡುವೆ ಎರಡೂವರೆ ಯಿಂದ ಮೂರು ರೂಪಾಯಿ ಪ್ರತಿ ಲೀಟರ್‌ಗೆ ಅಂತರವಿರುತ್ತದೆ. ಆದರೆ ಕೆ.ಎಂ.ಎಫ್‌ ಏಳೂವರೆಯಿಂದ ಎಂಟು ರೂಪಾಯಿ ಅಂತರವಿಟ್ಟುಕೊಂಡಿದೆ. ಸರ್ಕಾರ ನಾಲ್ಕು ರೂಪಾಯಿ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ ನೀಡುತ್ತಿದ್ದರೂ ಯಾಕೆ ಈ ತಾರಾತಮ್ಯ ಎಂಬುದು ಅರ್ಥವಾಗುತ್ತಿಲ್ಲ. ಅಂತರವನ್ನು ಕಡಿಮೆ ಮಾಡಿದರೆ ಗ್ರಾಹಕರಿಗೂ ಒಂದು ರೂಪಾಯಿ ಕಡಿಮೆಯಾಗುತ್ತದೆ. ಕೆ.ಎಂ.ಎಫ್‌ ವತಿಯಿಂದ ಉತ್ಪಾದಕರಿಗೆ ಲಾಭವಿಲ್ಲ.

ಸಹಕಾರ ಸಂಘಗಳು ಗ್ರಾಮೀಣ ಭಾಗದಲ್ಲಿ ರೈತರ ಮತ್ತು ಉತ್ಪಾದಕರ ದೊಡ್ಡ ಆಸ್ತಿ ಎಂಬುದನ್ನರಿತು ಸಹಕಾರ ಸಂಘ ಇನ್ನಷ್ಟು ಕ್ರಿಯಾಶೀಲರಾಗಬೇಕು. ಇದರಿಂದ ರೈತರಿಗೆ ಹೆಚ್ಚಿನ ಅನು ಕೂಲವಿದೆ ಎಂದರು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಪಿ.ಸಿ.ಎಸ್‌ ಅಧ್ಯಕ್ಷ ಸಂಪಂಗಿಗೌಡ ವಹಿಸಿದ್ದರು.

ಶಾಸಕ ಪಿಳ್ಳಮುನಿಶಾ ಮಪ್ಪ, ಮಾಜಿ ಸಂಸದ ಸಿ.ನಾರಾ ಯಣಸ್ವಾಮಿ, ಜಿ.ಪಂ ಸದಸ್ಯ ಬಿ. ರಾಜಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಚ್ಚೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಬಿ.ಚಂದ್ರಯ್ಯ, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಆವತಿ ವೆಂಕಟೇಶ್‌, ತಾಲ್ಲೂಕು ಕಾಂಗ್ರೆಸ್‌ ಹಿಂದುಳಿದ ವರ್ಗ ಘಟಕ ಅಧ್ಯಕ್ಷ ಕೋದಂಡ ರಾಮಯ್ಯ, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌ ತಾ.ಪಂ ಸದಸ್ಯ ವಿಜಯಕುಮಾರ್‌, ಖಾದಿ ಬೋರ್ಡ್‌ ಅಧ್ಯಕ್ಷ ಎಂ.ಶ್ರೀನಿ ವಾಸ್‌, ಮಾಜಿ ಅಧ್ಯಕ್ಷ ಹೆಚ್‌.ಎಂ. ರವಿಕುಮಾರ್‌, ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸಗೌಡ, ಗ್ರಾ.ಪಂ ಅಧ್ಯಕ್ಷೆ ಅರುಣ ಪುರು ಷೋತ್ತಮ್‌, ಹಾಲು ಒಕ್ಕೂಟ ಉಪವ್ಯವಸ್ಥಾಪಕ ಡಾ.ಎಂ.ಗಂಗಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT