ವಿಜಯಪುರ: ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಧನೆಗಳ ಮೂಲಕ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಉನ್ನತಿ ಸಾಧಿಸಬೇಕು ಎಂದು ಶಿರಾ ತಾಲ್ಲೂಕಿನ ಪಟ್ಟನಾಯಕನ ಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಹೇಳಿದರು.
ಇಲ್ಲಿನ ಗುರಪ್ಪನ ಮಠದ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸುಮಾರು 250 ವರ್ಷಗಳ ಹಿಂದೆ ಸ್ಥಾಪನೆಗೊಂಡ ಗುರಪ್ಪನ ಹಾಗೂ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಗಳು ಅವಧೂತ ಪರಂಪರೆಯಲ್ಲಿ ಬಂದಿದ್ದು, ಜನರಲ್ಲಿ ಆಧ್ಯಾತ್ಮಿಕ ಜ್ಞಾನ ಪಸರಿಸುತ್ತಿವೆ ಎಂದು ತಿಳಿಸಿದರು.
ಭಜನಾ ಕಾರ್ಯಕ್ರಮದಲ್ಲಿ ವೆಂಕಟಾಪುರ, ಬಳುವನ ಹಳ್ಳಿ, ಮಳ್ಳೂರು, ಹೊನ್ನ ಹಳ್ಳಿ ರೆಡ್ಡ ಹಳ್ಳಿ, ಮಿತ್ತನ ಹಳ್ಳಿ, ಭಕ್ತರ ಹಳ್ಳಿ, ಇಟ್ಟಪ್ಪನ ಹಳ್ಳಿ, ಪುರ, ಯಲುವ ಹಳ್ಳಿ, ಮಾರಪ್ಪನ ಹಳ್ಳಿ, ಮುದ್ದೇನ ಹಳ್ಳಿ, ಐಬಸಾಪುರ, ಹೊಸಪೇಟೆ, ಕೊಮ್ಮಸಂದ್ರ, ವೆಂಕಟೇನ ಹಳ್ಳಿ ಮತ್ತು ವಿಜಯಪುರದ ವಿವಿಧ ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು.
ಓಂಕಾರೇಶ್ವರ ಸ್ವಾಮಿ ಒಕ್ಕಲಿಗರ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ಗಿರಿಜಾಕಲ್ಯಾಣೋತ್ಸವ ಅದ್ದೂರಿಯಾಗಿ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.