ADVERTISEMENT

ಖಾತೆ ಆಂದೋಲನಕ್ಕೆ ಆಗ್ರಹ

ದೇವನಹಳ್ಳಿ ಪುರಸಭೆ ಸದಸ್ಯರು, ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 9:41 IST
Last Updated 8 ಜನವರಿ 2014, 9:41 IST

ದೇವನಹಳ್ಳಿ: ದೇವನಹಳ್ಳಿ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಮ್ಮುಖ ದಲ್ಲಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಅಧ್ಯ ಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷಾತೀ ತವಾಗಿ ಸದಸ್ಯರು ಖಾತಾ ಆಂದೋ ಲನಕ್ಕೆ ಆಗ್ರಹಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಪುರಸಭೆ ಸದಸ್ಯ ಎಂ.ಮೂರ್ತಿ, ‘ಪರಿಶಿಷ್ಟರ ಕಾಲೋ ನಿಯಲ್ಲಿ ಸ್ಥಳಿಯವಾಗಿ ವಾಸಿಸುತ್ತಿರುವ ಒಬ್ಬರಿಗೂ ಖಾತೆಯಾಗಿಲ್ಲ 20, 30 ಅಡಿ ನಿವೇಶನವಿದ್ದರೂ ಬರಿ 8–10 ಎಂದು ನಮೂದಿಸಲಾಗಿದೆ. ಇದರಿಂದ ಯಾವುದೇ ಸೌಲಭ್ಯಗಳು ಅರ್ಹರಿಗೆ ತಲುಪುತ್ತಿಲ್ಲ ಎಂದರು.

‘ನಗರ ವ್ಯಾಪ್ತಿಯ ಬಹುತೇಕ ಕಾಲೋನಿಗಳಲ್ಲಿ ಇದೇ ಸಮಸ್ಯೆ ಇದೆ. ಪಿತ್ರಾರ್ಜಿತವಾದ ವಾಸದ ಮನೆಗಳಿಗೂ ಇದುವರೆವಿಗೂ ಖಾತೆಯಾಗಿಲ್ಲವೆಂದರೆ ಇಲ್ಲಿನ ಅಧಿಕಾರಿಗಳು ಏನು ಮಾಡು ತ್ತಿದ್ದಾರೆ ಎಂದು ಶಾಸಕರೆದುರಿಗೆ ತರಾ ಟೆಗೆ ತೆಗೆದುಕೊಂಡರು. ಬರಿ ಪರಿಶಿಷ್ಟರ ಕಾಲೋನಿಯಲ್ಲಿಯೇ ಸಮಸ್ಯೆ ಇದೆ. ಕಂದಾಯ ವಸೂಲಿ ಮಾಡುತ್ತೀರಿ ಖಾತೆ ಮಾಡಿಕೊಡಲು ಯಾಕೆ ಹಿಂಜರಿಕೆ ಬೇರೆ ಬಡಾವಣೆಗಳಲ್ಲಿ ಈ ಸಮಸ್ಯೆ ಇಲ್ಲ ಎಂದರು.

ಪುರಸಭೆ ಸದಸ್ಯ ಜಿ.ಎ.ರವೀಂದ್ರ ಮಾತನಾಡಿ, ಕಳೆದ 15–20 ವರ್ಷ ಗಳಿಂದ ಖಾತೆ ನಿರ್ವಹಣೆ ಸಮರ್ಪಕ ವಾಗಿಲ್ಲ. ಖಾತೆಗಳ ಸಂಖ್ಯೆಯಲ್ಲಿ ಏರು ಪೇರು. ಮತ್ತೊಂದೆಡೆ ತಿದ್ದುಪಡಿ. ಇನ್ನೊಂದೆಡೆ ಖಾತೆದಾರರ ಹೆಸರೇ ಮಾಯ. ಯಾರದ್ದೋ ಹೆಸರಿನ ಮುಂದೆ ಮತ್ಯಾರದ್ದೋ ಹೆಸರು... ಹೀಗಾದರೆ ಪಟ್ಟಣದ ನಾಗರಿಕರು ಎಷ್ಟು ಬಾರಿ ಅಲೆಯಬೇಕು ? ವಾರ್ಡ್‌ನಿಂದ ಆಯ್ಕೆಗೊಂಡಿರುವ ಸದಸ್ಯರಾದ ನಾವು ಸ್ಥಳಿಯರಿಗೆ ಯಾವ ರೀತಿ ಉತ್ತರು ಹೇಳ ಬೇಕು ? ಅಧಿಕಾರಿಗಳು ಪುರಸಭೆ ಸದ ಸ್ಯರ ಖಾತೆಯನ್ನೇ ಮಾಡಿಕೊಡಲಿಲ್ಲ ಎಂದರೆ ಜನಸಾಮಾನ್ಯರಿಗೆ ಯಾವ ರೀತಿ ಸ್ಪಂದಿಸುತ್ತೀರಿ? ಮೊದಲು ಪ್ರತಿ ವಾರ್ಡಿನ ಸಭೆ ಕರೆದು ಖಾತಾ ಆಂದೋಲನ ನಡೆಸಿ. ಯಾರಿಗೆ ಖಾತೆ ಅಗಿಲ್ಲ ಎಂಬುದರ ಬಗ್ಗೆ ಪಟ್ಟಿ ಸಿದ್ದಪಡಿಸಿ. ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಿ ಎಂದು ಅವರು  ಆಗ್ರಹಿಸಿದರು.

ಸದಸ್ಯ ಶಶಿಕುಮಾರ್‌ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಯಾವ ಯಾವ ಯೋಜನೆಯಡಿ ಎಷ್ಟು ಅನುದಾನ ಬರುತ್ತಿದೆ ಎಂಬುದರ ಬಗ್ಗೆ ಮಾಹಿತಿ ಯನ್ನೇ ನೀಡುವುದಿಲ್ಲ. ಮುಖ್ಯಾಧಿಕಾ ರಿಯೂ ಸ್ಪಂದಿಸುವುದಿಲ್ಲ ಎಂದರು.

ಪುರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡುತ್ತಿಲ್ಲ. ಆದ್ದರಿಂದ ಪುರಸಭೆಯ ಶೇ. 22.75 ರಷ್ಟು ಅನುದಾನ ನಿರ್ವಹಣೆ ಅಧಿಕಾರಿಯನ್ನೂ ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಎಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಆರ್‌.ಮಂಜುನಾಥ್‌ ಮಾತನಾಡಿ, ನನ್ನ ಅವಧಿಯಲ್ಲಿ ಖಾತೆ ಸಮಸ್ಯೆ ಆಗಿಲ್ಲ. ಹೆಚ್ಚುವರಿ ಹಣ ಪಡೆದು ಖಾತೆ ಮಾಡಿಕೊಡುವ ಅವಕಾಶವಿದೆ. ಖಾತೆ ಆಂದೋಲನದಲ್ಲಿಯೇ ಖಾತೆ ಸಮಸ್ಯೆ ಬಗೆಹರಿಸೋಣವೆಂದರು.

ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕ ಪಿಳ್ಳಮುನಿಶ್ಯಾಮಪ್ಪ ರಾಜೀವ್‌ ಗಾಂಧಿ ವಸತಿ ನಿಗಮ 75 ವಸತಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪೈಕಿ 75 ಅರ್ಹ ಫಲಾನುಭವಿಗಳ ಪಟ್ಟಿ ನೀಡ ಲಾಗಿದೆ. ಹೆಚ್ಚುವರಿ 75 ಅರ್ಹರಿಗೆ ಎರಡನೇ ಹಂತದಲ್ಲಿ ನೀಡಲು ಪಟ್ಟಿ ತಯಾರಿಸುವಂತೆ ಸೂಚಿಸಲಾಗಿದೆ. ಖಾತೆ ಸಮಸ್ಯೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಮಾರ್ಟ್‌ ಸಿಟಿ ಕೌನ್ಸಿಲ್‌ ಕಾರ್ಯಕಾರಿ ನಿರ್ದೇಶಕ ಡಿ.ಸೀತಾರಾಂ ಮಾತನಾಡಿ, ಹಸಿರು ದೇವನಹ ಳ್ಳಿಯನ್ನಾಗಿಸಲು 80 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ವಿವಿಧ ದೇಶೀ ಯ ಮರ ಬೆಳೆಸುವುದು, ಶಿಕ್ಷಣ, ಪರಿಸರ ರಕ್ಷಣೆ, ಶುದ್ಧ ಕುಡಿಯುವ ನೀರು ಪೂರೈಕೆ ಸೇರಿಒದಂತೆ ಭವಿಷ್ಯದಲ್ಲಿ 200 ವರ್ಷಗಳಷ್ಟು ಶಾಶ್ವತ ಯೋಜನೆಯನ್ನು ಸ್ಮಾರ್ಟ್‌ ಸಂಸ್ಥೆ ಗುರಿ ಇಟ್ಟುಕೊಂಡಿದೆ. ಸಂಸ್ಥೆಯಿಂದಲೇ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಲಾಗುತ್ತಿದ್ದು ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.