ADVERTISEMENT

ಗಗನದಲ್ಲಿ ಹಾರಿ ಮನಸೆಳೆದ ಬಣ್ಣ ಬಣ್ಣದ ಗಾಳಿಪಟ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:47 IST
Last Updated 17 ಜುಲೈ 2017, 5:47 IST
ಗಗನದಲ್ಲಿ ಹಾರಿ ಮನಸೆಳೆದ ಬಣ್ಣ ಬಣ್ಣದ ಗಾಳಿಪಟ
ಗಗನದಲ್ಲಿ ಹಾರಿ ಮನಸೆಳೆದ ಬಣ್ಣ ಬಣ್ಣದ ಗಾಳಿಪಟ   

ದೊಡ್ಡಬಳ್ಳಾಪುರ: ಇಲ್ಲಿಯ ಗಾಳಿಪಟ ಕಲಾ ಸಂಘದ ವತಿಯಿಂದ ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವ- 2017 ಹಾಗೂ ಗಾಳಿಪಟ ಹಾರಿಸುವ ಸ್ಪರ್ಧೆ ಹಾಗೂ ನಗರ  ಗುಂಡಪ್ಪನವರ ಬಯಲಿನಲ್ಲಿ ಭಾನುವಾರ ನಡೆಯಿತು.

ಮಹಾರಾಷ್ಟ್ರದ ಅಶೋಕ್ ಕೈಟ್ ಕ್ಲಬ್‌ನ ಅಶೋಕ್‌ ಷಾ, ನಿಸರ್ಗ್ ಷಾ, ಶ್ರುತಿ ಷಾ, ಗುಜರಾತ್ ನ ವಡೋದರ ಕೈಟ್ ಕ್ಲಬ್ ನ ದಿಗಂತ್ ಜೋಷಿ, ಜಾಗೃತಿ ಜೋಷಿ, ಪಾವನಿ ಜೋಷಿ, ರಾಜ್ ಕೋಟ್ ದಿಂದ ಆನಂದ್ ಕೈಟ್ ಕ್ಲಬ್ ನ ಮಹೇಶ್ ಚಾವ್ಡ, ರಚಿತ್ ಚಾವ್ಡ, ಮೆಹುಲ್ ಚಾವ್ಡ, ಕಿರಣ್ ಸೋಲಂಕಿ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಿದರು.

ಕೇರಳದ ಕೈಟ್ ಲೈಫ್ ಫೌಂಡೇಷನ್ ನ ರಾಜೇಶ್ ನಾಯರ್, ಪುದುಚೇರಿಯ ಸೌಮ್ಯ ಸುಮಿತ್ರ ಬೆಹ್ರ, ಅಲ್ಲದೆ ಕರ್ನಾಟಕದ ಅಂತರರಾಷ್ಟ್ರೀಯ ಗಾಳಿಪಟ ತಜ್ಞ ಬೆಳಗಾವಿಯ ಸಂದೇಶ್ ಕಡ್ಡಿ ಮತ್ತಿತರ ಗಾಳಿಪಟದ ಕಲಾವಿದರು, ಆಕ್ಟೋಪಸ್, ಗ್ಲೋಬ್, ಬುಟ್ಟಿ ಮೊದಲಾದ ವಿಭಿನ್ನ ರೀತಿಯ ಗಾಳಿಪಟಗಳನ್ನು ಪ್ರದರ್ಶಿಸಿದರು.

ADVERTISEMENT

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಗಾಳಿಪಟ ಹಾರಿಸುವ ಸ್ಪರ್ಧೆಗೆ ಚಾಲನೆ ನೀಡಿದರು.

ಪಾರಂಪರಿಕ ಉತ್ಸವಗಳಲ್ಲಿ  ಗಾಳಿಪಟ ಹಾರಿಸುವ ಕಲೆ ಮುಖ್ಯವಾಗಿದೆ  ಎಂದರು.

ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಅಧ್ಯಕ್ಷ ಎಚ್.ಸಿ.ಜಗದೀಶ್, ಅಧ್ಯಕ್ಷತೆ ವಹಿಸಿದ್ದರು.

ನಗರಸಭಾ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಸದಸ್ಯರಾದ ಕೆ.ಜಿ.ರಘುರಾಂ, ಎಚ್.ಎಸ್. ಶಿವಶಂಕರ್,  ಗಾಳಿಪಟ ಕಲಾಸಂಘದ ಪದಾಧಿಕಾರಿಗಳು  ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದರು.

**

ಗಾಳಿಪಟದ ಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದು ಹೆಮ್ಮೆಯ ವಿಷಯ.  ಇಂತಹ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದ್ದು ಎಲ್ಲರ ಹಿತಾಸಕ್ತಿಯಾಗಿದೆ.
–ಕೆ.ಎಂ. ಹನುಮಂತರಾಯಪ್ಪ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.