ADVERTISEMENT

ಗ್ರಾಮೀಣ ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 10:15 IST
Last Updated 20 ಮಾರ್ಚ್ 2011, 10:15 IST
ಗ್ರಾಮೀಣ ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಿ
ಗ್ರಾಮೀಣ ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಿ   

ದೇವನಹಳ್ಳಿ: ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳತ್ತ ಯುವಕರು ಆಸಕ್ತಿ ಬೆಳೆಸಿಕೊಂಡು ಆ ಕ್ರೀಡೆಗಳ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎ.ಸೋಮಣ್ಣ ಸಲಹೆ ನೀಡಿದರು.ತಾಲ್ಲೂಕಿನ ಇಲತೊರೆ ಗ್ರಾಮದಲ್ಲಿ ಮುತ್ತುರಾಯಸ್ವಾಮಿ ಕನ್ನಡ ಯುವಕ ಸಂಘ ಮತ್ತು ಜೋಗಿಹಳ್ಳಿ ಯುವಕ ಸಂಘ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಸತತ ಅಭ್ಯಾಸ, ಪರಿಶ್ರಮ, ಸೂಕ್ತ ತರಬೇತಿ ಇದ್ದರೆ ಗುರಿ ಸಾಧನೆ ಸುಲಭ. ಕ್ರಿಕೆಟ್‌ಜೊತೆಗೆ ಗ್ರಾಮೀಣ ಕ್ರೀಡೆಗಳಿಗೂ ಗಮನ ನೀಡಬೇಕು. ಹಿರಿಯ ಕ್ರೀಡಾಪಟುಗಳ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಇಲತೊರೆ ಎಂಪಿಸಿಎಸ್ ಅಧ್ಯಕ್ಷ ಸಿ.ಕೃಷ್ಣಪ್ಪ ಮಾತನಾಡಿ, ದೈಹಿಕ ಮತ್ತು ಮಾನಸಿಕ ಜಡತ್ವ ದೂರ ಮಾಡಲು, ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಲು ಕ್ರೀಡೆ ಉತ್ತಮ ಸಾಧನ. ಇದನ್ನು ಯುವ ಪೀಳಿಗೆ ಅರಿಯಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಕನ್ನಮಂಗಲ ಗ್ರಾ.ಪಂ. ಅಧ್ಯಕ್ಷ ಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭೆಗಳಿದ್ದರೂ, ಸೂಕ್ತ ಅವಕಾಶ ಸಿಗುತ್ತಿಲ್ಲ. ಈ ದಿಸೆಯಲ್ಲಿ ಸಂಘ ಸಂಸ್ಥೆಗಳು ಕ್ರೀಡಾಪಟುಗಳನ್ನು ಮತ್ತು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ತಿಳಿಸಿದರು.ಕನ್ನಮಂಗಲ ಗ್ರಾ.ಪಂ.ಉಪಾಧ್ಯಕ್ಷೆ ಮಂಜುಳ ರಾಜಣ್ಣ, ಸದಸ್ಯ ಕೆ.ಸಿ.ಮಂಜುನಾಥ್, ವೆಂಕಟೇಶ್, ಮಂಜುನಾಥ್, ಎಂಪಿಸಿಎಸ್ ಕಾರ್ಯದರ್ಶಿ ವಿಜಯ ಕುಮಾರ್, ನಿರ್ದೇಶಕರಾದ ಚನ್ನಕೇಶವ, ಎಂ.ಮುನಿಶಾಮಪ್ಪ, ಮಾಜಿ ಅಧ್ಯಕ್ಷ ಪಿ.ಎಂ.ಪಟೇಲ್ ಗೋವಿಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕೆಂಪೇಗೌಡ ಹಾಜರಿದ್ದರು. ಶಿಕ್ಷಕ ಎನ್.ಶಿವಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.