ADVERTISEMENT

ತೆಪ್ಪದಲ್ಲಿ ತೆರಳಿ ಬಾಗಿನ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 4:59 IST
Last Updated 16 ಅಕ್ಟೋಬರ್ 2017, 4:59 IST

ಆನೇಕಲ್‌: ತಾಲ್ಲೂಕಿನ ಇಂಡ್ಲವಾಡಿಪುರದ ಕೆರೆ ತುಂಬಿ ಕೋಡಿ ಹೋಗಿದ್ದು ಗ್ರಾಮಸ್ಥರು ಗಂಗಾ ಪೂಜೆ ನೆರವೇರಿಸಿ ತೆಪ್ಪದ ಮೂಲಕ ಬಾಗಿನ ಅರ್ಪಿಸಿ ಸಂಭ್ರಮಿಸಿದರು.
ಇಂಡ್ಲವಾಡಿಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಶುಭಾನಂದ್ ಮಾತನಾಡಿ, ಹತ್ತು ವರ್ಷಗಳ ನಂತರ ಗ್ರಾಮದ ಕೆರೆಯು ತುಂಬಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ವರುಣ ರಾಯನ ಕೃಪೆಯಿಂದ ಉತ್ತಮ ಮಳೆಯಾಗಿದ್ದು ಕೆರೆ ಕುಂಟೆಗಳು ತುಂಬಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ ಎಂದರು.

ಹೈನುಗಾರಿಕೆ ಅಭಿವೃದ್ಧಿ ಹಾಗೂ ಅಂತರ್ಜಲ ಹೆಚ್ಚಾಗುವುದರಿಂದ ರೈತರಿಗೆ ಅತ್ಯಂತ ಅನುಕೂಲವಾಗಿದೆ. ಗ್ರಾಮಸ್ಥರು ಗಂಗಾ ಪೂಜೆಯ ಮೂಲಕ ಬಾಗಿನ ಅರ್ಪಿಸಿ ಸಾಂಪ್ರದಾಯಿಕ ಆಚರಣೆಯನ್ನು ಮಾಡುತ್ತಿರುವುದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.

ಮುಖಂಡರಾದ ಎಂ.ವೆಂಕಟನಾರಾಯಣ್, ಸುಮಾ ಶುಭಾನಂದ್‌, ಕೆಇಬಿ ಮುನಿಯಪ್ಪ, ಎ.ನರಸಿಂಹಯ್ಯ, ಸಿ.ಮುನಿರಾಜು, ಎಂ.ವಿ.ಸುರೇಶ್, ಮಹೇಶ್, ಮುರಳಿ, ಎಸ್.ಅಶೋಕ್‌, ಮೂರ್ತಿ, ಆರ್.ನಾಗರಾಜು, ಗೋಪಾಲಯ್ಯ, ಬಿ.ರಾಜಪ್ಪ, ಜಯರಾಮ್, ಸಂಪತ್‌ ನಾಯಕ್, ರವಿಕುಮಾರ್‌ಗೌಡ, ಶೇಖರ್, ಎನ್‌.ಮುನಿರಾಜು, ಮುನಿಕೃಷ್ಣ, ಮುನಿರಾಜು, ಶ್ರೀರಾಮ್, ಸೋಮಶೇಖರ್‌, ಎನ್.ನರಸಿಂಹ, ಯತೀಶ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಕ ವೆಂಕಟೇಶ್, ನಿರ್ದೇಶಕರಾದ ಎಂ.ವಿ.ಸತೀಶ್, ಲಕ್ಷ್ಮಮ್ಮ ಹಾಜರಿದ್ದರು. ಮಹಿಳೆಯರು ದೀಪಾರತಿಗಳನ್ನು ಹೊತ್ತು ಕೆರೆಯ ಬಳಿಗೆ ಬಂದು ಪೂಜೆ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.