ADVERTISEMENT

ದೇವನಹಳ್ಳಿ ಕೋಟೆ ಕೆರೆಯಂಗಳಕ್ಕೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 7:03 IST
Last Updated 6 ಜನವರಿ 2014, 7:03 IST
ದೇವನಹಳ್ಳಿ ಪಟ್ಟಣದಲ್ಲಿ ಐತಿಹಾಸಿಕ ಕೋಟೆ ಪಕ್ಕದಲ್ಲಿರುವ ಚಿಕ್ಕ ಸಿಹಿನೀರಿನ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಕೋಟೆ ಮೇಲ್ಭಾಗದಲ್ಲಿ ಸಭೆ ಸೇರಿ ಚರ್ಚಿಸಿದರು. ಜಿಲ್ಲಾಧಿಕಾರಿ ವಿ.ಶಂಕರ್, ತಹಶೀಲ್ದಾರ್ ಡಾ.ಎನ್.ಸಿ.ವೆಂಕಟರಾಜು, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅರವಿಂದ್ ಜಾಧವ್‌, ಮಾಜಿ ಶಾಸಕ ವೆಂಕಟಸ್ವಾಮಿ, ಜಿ.ಪಂ.ಸದಸ್ಯ ಬಿ.ರಾಜಣ್ಣ ಇದ್ದರು
ದೇವನಹಳ್ಳಿ ಪಟ್ಟಣದಲ್ಲಿ ಐತಿಹಾಸಿಕ ಕೋಟೆ ಪಕ್ಕದಲ್ಲಿರುವ ಚಿಕ್ಕ ಸಿಹಿನೀರಿನ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಕೋಟೆ ಮೇಲ್ಭಾಗದಲ್ಲಿ ಸಭೆ ಸೇರಿ ಚರ್ಚಿಸಿದರು. ಜಿಲ್ಲಾಧಿಕಾರಿ ವಿ.ಶಂಕರ್, ತಹಶೀಲ್ದಾರ್ ಡಾ.ಎನ್.ಸಿ.ವೆಂಕಟರಾಜು, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅರವಿಂದ್ ಜಾಧವ್‌, ಮಾಜಿ ಶಾಸಕ ವೆಂಕಟಸ್ವಾಮಿ, ಜಿ.ಪಂ.ಸದಸ್ಯ ಬಿ.ರಾಜಣ್ಣ ಇದ್ದರು   

ದೇವನಹಳ್ಳಿ: ಪಟ್ಟಣದ ಐತಿಹಾಸಿಕ ಕೋಟೆ ಪಕ್ಕದಲ್ಲಿರುವ ಚಿಕ್ಕ ಸಿಹಿ ನೀರಿನ ಕೆರೆಯಂಗಳದಲ್ಲಿ ವಾಯುವಿಹಾರ ಉದ್ಯಾನವನ ಜೊತೆಗೆ ಶಬ್ದದೀಪ ಅಳವಡಿಕೆಗೆ ಶೀಘ್ರದಲ್ಲಿಯೇ ಕಾಮ ಗಾರಿ ಆರಂಭಿಸಲಾಗುವುದು ಎಂದು ಕೇಂದ್ರ ಇಂಧನ ಮತ್ತು ನೈಸರ್ಗಿಕ ಅನಿಲ ಹಾಗೂ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ವೀರಪ್ಪ ಮೊಯಿಲಿ ತಿಳಿಸಿದರು.

ಇಲ್ಲಿನ ಟಿಪ್ಪು ಜನ್ಮಸ್ಥಳ ಮತ್ತು ಐತಿಹಾಸಿಕ ಕೋಟೆ ಪರಿಶೀಲಿಸಿ ಮಾತನಾಡಿದ ಅವರು, ‘ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಕಾರ್ಮಿಕ ಘಟಕದ ವತಿಯಿಂದ 6.25 ಕೋಟಿ ` ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಟಿಪ್ಪುಸುಲ್ತಾನ್ ಜನ್ಮಸ್ಥಳದ ಸುತ್ತಮುತ್ತಲ ಎರಡೂವರೆ ಎಕರೆ ಭೂಮಿ ಸಮಿವುಲ್ಲಾ ಎಂಬುವವರಿಗೆ ಸೇರಿದೆ. ಇದನ್ನು ಸರ್ಕಾರದ ವಶಕ್ಕೆ ಪಡೆದು ಪರ್ಯಾಯ ಭೂಮಿ ನೀಡುವಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಗೆ ಸೂಚಿಸ ಲಾಗಿದೆ. ಟಿಪ್ಪು ಜನ್ಮಸ್ಥಳವನ್ನು ಮತ್ತು ನಾಡಪ್ರಭು ಕೆಂಪೇಗೌಡರ ಪೂರ್ವಜರ ಜನ್ಮಸ್ಥಳ ಆವತಿ ಗ್ರಾಮದಲ್ಲಿ ಟಿಪ್ಪು ಪುತ್ಥಳಿ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗು ವುದು. ಇದೊಂದು ಉತ್ತಮ ಪ್ರವಾಸಿ ತಾಣ ಎಂಬುದರಲ್ಲಿ ಅನುಮಾನವಿಲ್ಲ ಎಂದರು.

ಚಿಕ್ಕಬಳ್ಳಾಪುರದ ಬಳಿ ಇರುವ ಭೋಗನಂದೀಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ` 9 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಬಿಹಾರ ದ ವೈಶಾಲಿ ಮತ್ತು ಒಡಿಶಾ, ಕೇರಳ ರಾಜ್ಯದ ಮಾದರಿಯಲ್ಲಿ ಇದರ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಹಾಗೂ ಇಲಾಖೆ ಕಂದಾಯ ಇಲಾಖೆಗಳು ಸಹಕರಿಸಲಿವೆ ಎಂದರು.

ಲೋಕಸಭಾ ಚುನಾವಣೆ ಸಮೀಪಿ ಸುತ್ತಿರುವುದರಿಂದ ಈ ಅಭಿ ವೃದ್ಧಿ ಕಾರ್ಯ ಕೈಗೆತ್ತಿಕೊಳ್ಳ ಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ರಾಜ್ಯ ಸರ್ಕಾರದ ಸಹಕಾರ ಅತಿಮುಖ್ಯ ವಾಗಿತ್ತು. ಹಾಗಾಗಿ ಈಗ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅರವಿಂದ್ ಜಾಧವ್‌, ಕೆ.ಪಿ.ಸಿ.ಸಿ ಕಾರ್ಯದರ್ಶಿ ನಫೀಜಾ ಫಾತೀಮಾ, ಮತ್ತು ಜಿ.ಎ.ಬಾವಾ, ಮಾಜಿ ಶಾಸಕ ವೆಂಕಟಸ್ವಾಮಿ, ಜಿ.ಪಂ ಸದಸ್ಯ ಬಿ.ರಾಜಣ್ಣ, ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಚಿನ್ನಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್ನಾಥ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್‌, ತಾಲ್ಲೂಕು ಕೃಷಿಕ ಸಮಾಜದ ಖಜಾಂಚಿ ಲಕ್ಷ್ಮೀ ನರಸಿಂಹ ಸ್ವಾಮಿ, ಪುರಸಭೆ ಸದಸ್ಯ ಎಂ.ಮೂರ್ತಿ, ಮಾಜಿ ಸದಸ್ಯ ಕುಮಾರ್‌, ಕೃಷಿಕ ಸಮಾಜ ನಿರ್ದೇಶಕ ಎಚ್‌.ಎಂ.ರವಿ ಕುಮಾರ್‌, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ಗ್ರಾ.ಪಂ ಮಾಜಿ ಅಧ್ಯಕ್ಷ ಎನ್‌.ಟಿ. ನಾಗೇಶ್‌, ಕುಂದಾಣ ಹೋಬಳಿ ಕಾಂಗ್ರೆಸ್‌ ಪರಿಶಿಷ್ಟ ಘಟಕದ ಅಧ್ಯಕ್ಷ ಕೆ.ವಿ.ಸ್ವಾಮಿ, ಟಿ.ಪಿ.ಎಂ.ಸಿ.ಎಸ್‌ ಮಾಜಿ ಅಧ್ಯಕ್ಷ ಎ.ವಿ.ನಾರಾಯಣ ಸ್ವಾಮಿ ಮತ್ತು ಸಿ.ಕೆ.ರಾಮಚಂದ್ರಪ್ಪ, ಜಿಲ್ಲಾ ಧಿಕಾರಿ ವಿ.ಶಂಕರ್‌, ತಹಶೀಲ್ದಾರ್‌ ಡಾ.ಎನ್‌.ಸಿ.ವೆಂಕಟ ರಾಜು, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೋಮಣ್ಣ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುನಿರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.