ADVERTISEMENT

ಬಿಎಂಟಿಸಿ ಬಸ್ ಸಂಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ದೇವನಹಳ್ಳಿ: ತಾಲ್ಲೂಕಿನ ಜಾಲಿಗೆ ಗ್ರಾಮದಲ್ಲಿ ಗುರುವಾರ ಶಾಸಕ ಕೆ.ವೆಂಕಟಸ್ವಾಮಿ ಬೆಂಗಳೂರು ಮಹಾನಗರ ಸಾರಿಗೆ  (297 ಎಂ) ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

`ಬಹು ದಿನಗಳ ನಿರೀಕ್ಷೆಯಂತೆ ಈ ಸಂಚಾರ ಆರಂಭವಾಗಿದೆ. ಇದರಿಂದ ಈ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದರು.

ಈಗಾಗಲೇ ಬಿಎಂಟಿಸಿ ಘಟಕವು ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಉದ್ಘಾಟನೆಯಾಗಿದೆ. 8 ತಿಂಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಾಂತರ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆಯಾಗಲಿದೆ ಎಂದರು.

ದೊಡ್ಡಬಳ್ಳಾಪುರದಿಂದ ಬಾಶೆಟ್ಟಹಳ್ಳಿ - ಮಾರಸಂದ್ರ ಮಾರ್ಗವಾಗಿ ಅರದೇಶನಹಳ್ಳಿ ಬಸವನಾಪುರ, ಜಾಲಿಗೆ, ಕಾಮೇನಹಳ್ಳಿ, ತಿಂಡ್ಲು ಕ್ರಾಸ್, ಇ.ಹೊಸೂರು, ಹೆಗ್ಗನಹಳ್ಳಿ, ನಾಗಮಂಗಲ, ಸಾದಹಳ್ಳಿ, ಜೋಗೀಹಳ್ಳಿ, ಕೆಂಪತಿಮ್ಮನಹಳ್ಳಿ. ಉಗನವಾಡಿ ಕ್ರಾಸ್, ಐ.ವಿ.ಸಿ ರಸ್ತೆ ಮೂಲಕ ಪ್ರಥಮ ಹಂತದಲ್ಲಿ ಒಂದು ಬಸ್ ಹಾಗೂ 6 ಸಿಂಗಲ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರಿರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಅಪ್ಪಯ್ಯಣ್ಣ ಗ್ರಾ.ಪಂ ಅಧ್ಯಕ್ಷ ನರಸಿಂಹಮೂರ್ತಿ (ನಚ್ಚಿ), ಉಪಾಕ್ಷ ನಾಗರಾಜ್, ತಾಲ್ಲೂಕು ಖಾದಿ ಬೋರ್ಡ್ ಅಧ್ಯಕ್ಷ ಕೆ.ಪಟಾಲಪ್ಪ ಗ್ರಾ.ಪಂ ಸದಸ್ಯೆ ವನಿತಾ ಸುಬ್ರಮಣಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್. ಶಂಕರ್ ಆಚಾರ್ಯ, ಜುಂಜಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.