ADVERTISEMENT

ಬೆಟ್ಟಕೋಟೆ ಶಾಲೆ ಸಾಧನೆ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ದೇವನಹಳ್ಳಿ: ತಾಲ್ಲೂಕಿನ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆಯು ಸತತ ಮೂರು ದಶಕಗಳಿಂದ ಹಾಕಿ ಹಾಗೂ ಬಾಸ್ಕೆಟ್ ಬಾಲ್ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುತ್ತಾ  ಕ್ರೀಡಾ ಕ್ಷೇತ್ರ ದಲ್ಲಿ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಲ್ಲಪ್ಪ ತಿಳಿಸಿದರು.

ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣ ಕ್ರೆಡಾ (ಪೈಕಾ) ಅಲ್ಲದೆ ದಸರಾ ಕ್ರೀಡಾಕೂಟಗಳಲ್ಲಿ ಪ್ರತಿಬಾರಿ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ನಿಯರು ಸತತವಾಗಿ ಭಾಗವಹಿಸಿ ಪ್ರಶಸ್ತಿ ಪಡೆ ಯುವಲ್ಲಿ ಯಶಸ್ವಿಯಾಗುತ್ತಿರುವುದು ಗ್ರಾಮೀಣ ಕ್ರೆಡಾ ಪ್ರತಿಭೆಗಳ ಶ್ರದ್ಧೆ, ಪರಿಶ್ರಮ, ಸತತ ಅಭ್ಯಾಸಕ್ಕೆ ಸಾಕ್ಷಿಯಾಗಿದೆ ಅಲ್ಲದೆ ತರಬೇತಿ ನೀಡಿ ಪ್ರೊತ್ಸಾಹ ನೀಡುತ್ತಿರುವ ದೈಹಿಕ ಶಿಕ್ಷಕರ ಕ್ರೆಡಾ ಬದ್ಧತೆಯು ಸೇರಿದೆ ಎಂದು ಅಭಿನಂದಿಸಿದರು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗರಾಜು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬೆಟ್ಟಕೋಟೆ ಶಾಲೆಯ ವಿದ್ಯಾರ್ಥಿನಿಯರು ಛತ್ತಿಸ್‌ಗಡದ ರಾಯಪುರದಲ್ಲಿ ಇತ್ತೀಚೆಗೆ ನಡೆದ 14ವರ್ಷದ ವಯೋಮಿತಿ ವಿಭಾ ಗದ ರಾಷ್ಟ್ರ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ರಕ್ಷಿತಾ, ಸಹನಾ ಮತ್ತು ವಿದ್ಯಾ ರಾಜ್ಯಮಟ್ಟದಿಂದ ಪ್ರತಿನಿಧಿ ಸಿದ್ದರು. ಅದೇ ರೀತಿ ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಹಾಕಿಯಲ್ಲಿ 16ವರ್ಷದ ವಯೋಮಿತಿ ಸ್ಪರ್ಧೆಯಲ್ಲಿ ಆರ್.ಶೃತಿ ಎನ್.ಚೈತ್ರಾ ಪ್ರನಿಧಿಸಿದ್ದರು.  ಅಲ್ಲದೆ ಹರಿಯಾಣದ ಸಿರ್ಸಾದಲ್ಲಿ ನಡೆದ ರಾಷ್ಟ್ರಮಟ್ಟದ ಪೈಕಾ ಬಾಸ್ಕೆಟ್ ಬಾಲ್ ಕ್ರೆಡಾಕೂಟದಲ್ಲಿ ಬಿ.ಆರ್.ಚೈತ್ರಾ, ಎಸ್.ಮೇಘ, ಲಾವಣ್ಯ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಅಶ್ವತ್ಥನಾರಾಯಣ ಮಾತ ನಾಡಿ, ಪುಟ್ಟ ಗ್ರಾಮದಲ್ಲಿನ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವುದು ಅಷ್ಟು ಸುಲಭವಲ್ಲ, ಆತ್ಮಸ್ಥೈರ್ಯ, ಸ್ಫೂರ್ತಿ ತುಂಬುವುದರ ಜೊತೆಗೆ ತರಬೇತಿ ಅವಶ್ಯಕ. ಗ್ರಾಮಸ್ಥರ ಹಾಗೂ ಶಾಲಾ ಶಿಕ್ಷಕರ ಮತ್ತು ಪೋಷಕರ ಸಹಕಾರ ನಿರಂತರ ವಾಗಿದ್ದಾಗ ಹೆಚ್ಚಿನ ಪ್ರತಿಭೆಗಳು ಹೊರಬರಲು ಸಾಧ್ಯವೆಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಹೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.