ADVERTISEMENT

ಭಾರಿ ಮಳೆಗೆ ಕೋಡಿ ಬಿದ್ದ ಕೆರೆ – ಕಟ್ಟೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 5:18 IST
Last Updated 14 ಅಕ್ಟೋಬರ್ 2017, 5:18 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರವ ಣೂರು ಕೆರೆ ಬುಧವಾರ ರಾತ್ರಿ ಕೋಡಿ ಬಿದ್ದಿರುವುದರಿಂದ ಗ್ರಾಮಸ್ಥರು ಗಂಗೆ ಪೂಜೆ ಸಲ್ಲಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರವ ಣೂರು ಕೆರೆ ಬುಧವಾರ ರಾತ್ರಿ ಕೋಡಿ ಬಿದ್ದಿರುವುದರಿಂದ ಗ್ರಾಮಸ್ಥರು ಗಂಗೆ ಪೂಜೆ ಸಲ್ಲಿಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕೆರೆ, ಕುಂಟೆಗಳು ಕೋಡಿ ಬಿದ್ದಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ತಾಲ್ಲೂಕಿನ ಮಧುರೆ ಹೋಬಳಿಯಲ್ಲಿ 34 ಮಿ.ಮೀ, ಸಾಸಲು ಹೋಬಳಿ 83 ಮಿ.ಮೀ, ತೂಬಗೆರೆ ಹೋಬಳಿ 69 ಮಿ.ಮೀ, ಕಸಬಾ ಹೋಬಳಿ 46 ಮಿ.ಮೀ, ದೊಡ್ಡಬೆಳವಂಗಲ ಹೋಬಳಿ 66 ಮಿ.ಮೀ ಮಳೆಯಾಗಿದೆ.

ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ, ಕಸಬಾ ಹೋಬಳಿ ಶ್ರವ ಣೂರು ಕೆರೆ ಕೋಡಿ ಬಿದ್ದಿವೆ. ಸಾಸಲು ಹೋಬಳಿಯಲ್ಲಿ ಬುಧವಾರ ರಾತ್ರಿ 83 ಮಿ.ಮೀ ಮಳೆಯಾಗಿರುವುದರಿಂದ ಬಹುತೇಕ ಕೆರೆಗಳಿಗೂ ಮುಕ್ಕಾಲು ಭಾಗದಷ್ಟು ನೀರು ಬಂದಿದ್ದು ಗುಂಡ ಮಗೆರೆ ಕೆರೆ ಕೋಡಿ ಬಿದ್ದು, ಹಲವು ಕೆರೆ, ಕುಂಟೆಗಳು ತುಂಬಿ ಹರಿಯುತ್ತಿವೆ.

ದೊಡ್ಡಬೆಳವಂಗಲ ಹೋಬಳಿಯ ಸೋಣ್ಣೇನಹಳ್ಳಿ ಕೆರೆ ತೂಬು ಕಿತ್ತು ಬಿರುಕು ಬಿಟ್ಟಿರುವುದರಿಂದ ಯುವಕರು ಶ್ರಮದಾನ ಮಾಡುವ ಮೂಲಕ ತೂಬು ದುರಸ್ತಿಗೊಳಿಸಿದರು.
ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಸೋಣ್ಣೇನಹಳ್ಳಿ ಕೆರೆಯ ತೂಬು ಶಿಥಿಲಗೊಂಡಿದೆ.

ADVERTISEMENT

ಈ ಬಗ್ಗೆ ಹಲವು ಸಲ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಿದರೂ ದುರಸ್ತಿಪಡಿಸಿಲ್ಲ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.