ADVERTISEMENT

ಮೊಬೈಲ್ ಗೀಳಿನಿಂದ ಮೌಲ್ಯಗಳ ಕುಸಿತ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 4:54 IST
Last Updated 13 ಅಕ್ಟೋಬರ್ 2017, 4:54 IST

ದೊಡ್ಡಬಳ್ಳಾಪುರ: ಇಂದಿನ ಪೀಳಿಗೆ ಸುಲಭದ ಕೆಲಸ ಹುಡುಕುವಲ್ಲಿ ನಿರತ ರಾಗಿದ್ದು, ಕೈಗೆ ಸಿಕ್ಕ ಅವಕಾಶ ಕಳೆದು ಕೊಳ್ಳುತ್ತಿದ್ದಾರೆ. ಉದ್ಯೋಗಕ್ಕೆ ಬೇಕಾದ ಕೌಶಲ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಹೇಳಿದರು.

ನಗರದ ಲಯನ್ಸ್ ಕ್ಲಬ್ ಬಿಲ್ಡಿಂಗ್‌ನಲ್ಲಿ ಆರೋಗ್ಯ ಸೇವೆಗಳ ಕೇಂದ್ರದ ಸಹ ಯೋಗದಲ್ಲಿ ಗುರುವಾರ ನಡೆದ ಕೇಂದ್ರ ಸರ್ಕಾರದ ನ್ಯಾಷನಲ್ ಸ್ಕಿಲ್ ಡೆವಲಪ್‌ ಮೆಂಟ್ ಕಾರ್ಪೋರೇಷನ್, ಸ್ಕಿಲ್ ಇಂಡಿಯಾ ಎಜುಕ್ಯಾಂಪ್ ಮತ್ತು ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ ವತಿಯಿಂದ ಕೌಶಲ್ಯ ತರಬೇತಿ ಪಡೆದ ವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ರೇಷ್ಮೆ ಉದ್ಯೋಗದಲ್ಲಿ ಕೋಟ್ಯಂತರ ರೂಪಾಯಿ ಗಳಿಸುತ್ತಿರುವ ರೈತರಿದ್ದಾರೆ. ಕೇವಲ ವಿದ್ಯಾಭ್ಯಾಸ ಎಲ್ಲಾ ವಿಚಾರಕ್ಕೂ ಮಾನದಂಡವಾಗುವುದಿಲ್ಲ. ಪರಿಶ್ರಮ ಪ್ರತಿಯೊಂದು ಕೆಲಸಕ್ಕೂ ಅಗತ್ಯವಾಗು ತ್ತದೆ. ಆಸಕ್ತಿಯಿಂದ ಕಲಿತು ಕ್ಷೇತ್ರ ದಲ್ಲಿ ಪರಿಣತಿ ಪಡೆದು ಉನ್ನತ ಸ್ಥಾನಕ್ಕೆ ಹೋಗ ಬೇಕಾಗುತ್ತದೆ. ಪ್ರಧಾನಿ ಮೋದಿ ಅವರ
ಕೌಶಲ ಅಭಿವೃದ್ದಿ ಯೋಜನೆ ನಿರು ದ್ಯೋಗಿಗಳಿಗೆ ವರದಾನವಾಗಿದೆ ಎಂದರು.

ADVERTISEMENT

ಶ್ರೀರಾಮ ಆಸ್ಪತ್ರೆ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ಆಧುನಿಕ ಜಗತ್ತು ಕಾಲ ಕಾಲಕ್ಕೆ ಬದಲಾಗುತ್ತಾ ಹೋದಂತೆ ಪ್ರಸ್ತುತ ಪೀಳಿಗೆ ಜನರಿಗೆ ಕೌಶಲ ಅಗತ್ಯ ಎಂದರು. ವಿವಿಧ ಕ್ಷೇತ್ರಗಳಲ್ಲಿನ ಕೌಶಲಗಳನ್ನು ಕೇಂದ್ರ ಸರ್ಕಾರ ತರಬೇತಿ ನೀಡುತ್ತಿ ರುವುದು ಅತ್ಯಂತ ಉಪಯುಕ್ತವಾಗಿದೆ. ಹಿಂದೆ ಯಾವುದೇ ಕೌಶಲಗಳಿಲ್ಲದೆ ಮಾಡುತ್ತಿದ್ದ ಕೆಲಸ ಅನಾಹುತಗಳಿಗೆ ಎಡೆ ಮಾಡಿ ಕೊಡುತ್ತಿದ್ದವು. ಆದರೆ, ಪ್ರಸ್ತುತ ಸರ್ಕಾರದ ವತಿಯಿಂದ ಒದಗಿಸುತ್ತಿರುವ ಉಪಯುಕ್ತವಾಗುತ್ತದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಡಾ.ಹುಲಿಕಲ್‌ ನಟರಾಜ್ ಮಾತನಾಡಿ, ಸಮಾಜದಲ್ಲಿ ಪ್ರತಿಯಿಂದಕ್ಕೂ ಹಣ ಅಗತ್ಯವಾಗಿದೆ. ಯುವಕರು ಹಣ ಸಂಪಾದನೆ ಒತ್ತಡದಲ್ಲಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಮೊಬೈಲ್‌ಗಳಿಗೆ ಅಂಟಿಕೊಂಡು ಮಾನವೀಯ ಮೌಲ್ಯ ಮರೆಯುತ್ತಿದ್ದಾರೆ.

ಕೌಶಲ ತರಬೇತಿ ಎಂದರೆ ಕೇವಲ ವೃತ್ತಿಗಷ್ಟೇ ಸೀಮಿತವಾಗಬಾರದು. ಅದು ಪ್ರಜ್ಞಾವಂತ ವ್ಯಕ್ತಿತ್ವ ರೂಪಿಸುವಂತಾಗ ಬೇಕು. ಪ್ರಜ್ಞಾವಂತ ವ್ಯಕ್ತಿಗಳಿಂದ ಉತ್ತಮ ಸಮಾಜ ನಿರ್ಮಿಸಬಹುದು ಎಂದರು. ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮದ ರಾಜ್ಯ ಮುಖ್ಯಸ್ಥೆ ಸುಮತಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ತರಬೇತಿ ಪಡೆದಿದ್ದಾರೆ. ಕೇವಲ ಪ್ರಮಾಣ ಪತ್ರಕ್ಕಾಗಿ ತರಬೇತಿ ಪಡೆಯದೆ, ನಿಜವಾದ ಕೌಶಲ ಪಡೆದಿದ್ದಾರೆ.

ಉತ್ತಮ ಫಲಿತಾಂಶ ಗಳಿಸಿಕೊಂಡು ಇದೀಗ ಉತ್ತಮ ಉದ್ಯೋಗ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆ ಎಂದರು. ಜನರಲ್ ಡ್ಯೂಟಿ ಅಸಿಸ್ಟೆಂಟ್ ಹಾಗೂ ಹೋಮ್ ಹಲ್ತ್ ಏಯ್ಡ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸ್ಕಿಲ್ ಡೆವಲೆಪ್ ಮೆಂಟ್ ಯೋಜನೆಯ ಅಧ್ಯಕ್ಷ ಕೀರ್ತಿವೆಂಕಟ್, ಇಂದ್ರಜಿತ್ ಮುಖರ್ಜಿ, ಲಯನ್ ಶಿವಣ್ಣ, ಶಿಕ್ಷಕ ರಾಮಮೂರ್ತಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.