ADVERTISEMENT

ರೂ 1.5 ಕೋಟಿ ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 9:03 IST
Last Updated 10 ಜನವರಿ 2014, 9:03 IST

ಆನೇಕಲ್‌: ಪಟ್ಟಣದ ದೇವರ ಕೊಂಡಪ್ಪ ವೃತ್ತದಿಂದ ಅತ್ತಿಬೆಲೆ ರಸ್ತೆ, ಶಿವಾಜಿ ವೃತ್ತದಿಂದ ಬನ್ನೇರುಘಟ್ಟ ರಸ್ತೆ ಹಾಗೂ ಗಾಂಧಿ ವೃತ್ತದಿಂದ ಗುಡ್ಡನ ಹಳ್ಳಿ ಮಾರ್ಗದವರೆಗೆ ಅಂದಾಜು ` 1.5 ಕೋಟಿ ವೆಚ್ಚದ ಜೋಡಿ ರಸ್ತೆ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, 'ಆನೇಕಲ್‌ ಪಟ್ಟಣದ ಸಮಗ್ರ ಅಭಿ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗು ವುದು. ಪ್ರಮುಖ ವೃತ್ತಗಳಿಂದ ಪುರ ಸಭೆಯ ಗಡಿವರೆಗೆ ಜೋಡಿ ರಸ್ತೆ ನಿರ್ಮಿಸಿ ಮಾದರಿ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡಲು ಯೋಜನೆ ಗಳನ್ನು ಕೈಗೊಳ್ಳಲಾಗುವುದು. ಅಭಿ ವೃದ್ದಿಯ ವಿಚಾರದಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಕೈಜೋಡಿಸಬೇಕು’ ಎಂದು ಹೇಳಿದರು.

ತಲಾ ` 50ಲಕ್ಷ ವೆಚ್ಚದ ಕಾಮ ಗಾರಿಯನ್ನು 3ತಿಂಗಳ ಅವಧಿಯಲ್ಲಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉತ್ತಮ ರಸ್ತೆ ಅಭಿವೃದ್ಧಿ ಯ ಸಂಕೇತ ರಸ್ತೆಗಳು ಅಂದವಾಗಿ ಕಾಣಲು ರಸ್ತೆಗಳ ಮಧ್ಯೆ ವಿಭಜಕಗಳು ಹಾಗೂ ವಿದ್ಯುತ್‌ ದೀಪಗಳನ್ನು ಅಳ ವಡಿಸಲಾಗುವುದು. ಕಾಮಗಾರಿ ಅನು ಷ್ಠಾನದಲ್ಲಿ ತಡೆಬಾ ರದಿರಲು ವಿದ್ಯುತ್‌, ಪಿಡಬ್ಲ್ಯೂಡಿ ಹಾಗೂ ಪುರಸಭೆ ಅಧಿಕಾರಿಗಳ ಸಹಕಾರ ಕೋರಲಾಗಿದೆ.

ಕಂಬ ಸರಿಸುವಿಕೆ, ಅಡ್ಡ ಬಂದ ಮರಗಳ ತೆರವು, ನೀರು ಹಾಗೂ ಸ್ಯಾನಿಟರ್‌ ಪೈಪ್‌ ಸ್ಥಾನ ಪಲ್ಲಟದ ಬಗ್ಗೆ ಚರ್ಚಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸ ಲಾಗಿದೆ ಎಂದರು. ಎಲ್ಲಾ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.