ADVERTISEMENT

ವಿಲೇವಾರಿಯಾಗದ ತ್ಯಾಜ್ಯ: ರೋಗದ ಭೀತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ದೇವನಹಳ್ಳಿ: ತ್ಯಾಜ್ಯ ವಿಲೇವಾರಿಯಾಗದ ಕಾರಣ ಇಲ್ಲಿನ ಹಳೆ ಬಸ್ ನಿಲ್ದಾಣ ದುರ್ವಾಸನೆ ಬೀರುತ್ತಿದ್ದು, ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಮೂಗು ಮುಚ್ಚಿಕೊಳ್ಳುವಷ್ಟು ದುರ್ನಾಥ, ಸತ್ತ ಪ್ರಾಣಿಗಳ ವಾಸನೆ, ಹೋಟೆಲ್ ತ್ಯಾಜ್ಯಗಳ ರಾಶಿಗಳು ಸಹಿಸಲಾರದಷ್ಟು ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನಸಾಮಾನ್ಯರಲ್ಲಿ ಎದುರಾಗಿದೆ.

ಪುರಸಬೆ ವ್ಯಾಪ್ತಿಯ ಕುಂಬಾರ ಬೀದಿ, ದಾಸರ ಬೀದಿ, ಸರೋವರ ಬೀದಿ, ಟಿಪ್ಪುರಸ್ತೆ, ತಾಲ್ಲೂಕು ಕಛೇರಿ ರಸ್ತೆ ಗಾಣಿಗರ ಬೀದಿ ಮೊದಲಾದ ಪ್ರದೇಶಗಳಕಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಆದರೆ ಹಳೆ ಬಸ್ ನಿಲ್ದಾಣದಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡದೆ ತಾರತಮ್ಯ ಮಾಡಲಾಗುತ್ತಿದ ಎಂಬುದು ಇಲ್ಲಿನ ಸ್ಥಳೀಯರ ದೂರು.

ಬಸ್ ನಿಲ್ದಾಣದ ಸುತ್ತಮುತ್ತ ಹಲವಾರು ಹೋಟೆಲ್‌ಗಳಿವೆ. ದಿನ ನಿತ್ಯದ ವಸ್ತುಗಳ ವ್ಯಾಪಾರ ವಹಿವಾಟು ಸಹ ಇಲ್ಲೇ ನಡೆಯುತ್ತದೆ. ಸಂತೆಗೆ ಬರುವ ಸೊಪ್ಪು ತರಕಾರಿಗಳು ಮಾರಾಟವಾಗದೆ ಉಳಿದರೆ ಮಾರಾಟಗಾರರು ರಸ್ತೆ ಬದಿಯಲ್ಲೇ ಬಿಟ್ಟು ಹೋಗುತ್ತುದ್ದು ಪರಿಸ್ಥತಿ ಮತ್ತಷ್ಟು ಬಿಗಡಾಯಿಸಿದೆ. ಅಲ್ಲದೆ ಕಸ ಹಾಕಲು ಪುರಸಭೆ ಕಸದ ಬುಟ್ಟಿಯನ್ನು ಇರಿಸಿದೆಯಾದರೂ ಅದರೊಳಗೆ ತ್ಯಾಜ್ಯಗಳನ್ನು ಸುರಿಯಬೇಕೆಂಬ ಪರಿಜ್ಞಾನ ಹೋಟೆಲ್ ಮಾಲೀಕರಿಗೆ ಇಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ನೈರ್ಮಲ್ಯ ಕಾಪಾಡುವಲ್ಲಿ ಪುರಸಭೆ ಸಂಪುರ್ಣ ವಿಫಲವಾಗಿದೆ ಎಂಬುದು ಇಲ್ಲಿನವರ ಆರೋಪ.

ದುರ್ವಾಸನೆ ನಡುವೆಯೇ ಅಂಗಡಿ ಮಾಲೀಕರು ತಮ್ಮ ನಿತ್ಯದ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ವಾಯು ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸ್ಥಳೀಯರಾದ ಎಸ್.ಸಿ. ಚಂದ್ರಪ್ಪ, ವೆಂಕಟೇಶ್, ಮಂಜುನಾಥ್, ಡಿ.ಕೆ.ರವಿ, ಮುಂತಾದವರು ಪುರಸಭೆ ಅಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಖಾಸಗಿ ಆಸ್ಪತ್ರೆಯ ವಿಷಯುಕ್ತ ತ್ಯಾಜ್ಯ ಸೇರಿದಂತೆ 23 ವಾರ್ಡ್‌ಗಳ 4 ಟನ್ ನಿರುಪಯುಕ್ತ ವಸ್ತುಗಳು ಪ್ರತಿದಿನ ಈ ಪ್ರದೇಶದಲ್ಲಿ ಬಂದು ಬೀಳುತ್ತದೆ. ಪುರಸಭೆ ಅಸ್ವಿತ್ವಕ್ಕೆ ಬಂದಾಗಿನಿಂದ ಇದುವರೆವಿಗೂ ಕಸ ಸುರಿಯಲು ನಿರ್ಧಿಷ್ಟ ಸ್ಥಳ ನಿಗಧಿ ಮಾಡಲಾಗಿಲ್ಲ. ನಾರರಿಕರ ಹಿತ ದೃಷ್ಟಿಯಿಂದ ಪುರ ಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.