ADVERTISEMENT

ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ:ಭರವಸೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 10:50 IST
Last Updated 9 ಜನವರಿ 2011, 10:50 IST

ವಿಜಯಪುರ: ದಿನ್ನೂರಿನ ಶ್ರೀ ಮುನೇಶ್ವರಸ್ವಾಮಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಿಸುವ ಅಗತ್ಯವಿದ್ದು, ಇದಕ್ಕೆ ಸಹಕಾರ ನೀಡುವುದಾಗಿ ಜಿ.ಪಂ. ನೂತನ ಸದಸ್ಯ ಬಿ.ರಾಜಣ್ಣ ಭರವಸೆ ನೀಡಿದರು. ಇಲ್ಲಿನ ದಿನ್ನೂರು ಶ್ರೀ ಮುನೇಶ್ವರಸ್ವಾಮಿ ದೇವಾಲದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಶೇಷಪೂಜೆ, ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಲ್ಲೂರು ಗ್ರಾಮದ ಶ್ರೀ ಗಂಗಮ್ಮತಾಯಿ ದೇವಾಲಯದ ಬಳಿ ಸಮುದಾಯಭವನ ನಿರ್ಮಿಸಲಾಗುತ್ತಿದೆ. ಐಬಸಾಪುರ ಗ್ರಾಮದಲ್ಲಿ ಸ್ತ್ರೀಶಕ್ತಿ ಗುಂಪಿನ ಚಟುವಟಿಕೆಗಾಗಿ ಭವನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಜವಾಬ್ದಾರಿಯುತವಾಗಿ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುತ್ತೇನೆ. ಮೇ ಮಾಸದ ನಂತರ ಬರುವ ಚನ್ನರಾಯಪಟ್ಟಣ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಸುಲಭವಾಗಿ ಜರುಗುತ್ತವೆ ಎಂದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಬೇಕಿದೆ. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕಾರ್ಯಯೋಜನೆ ರೂಪಿಸಲಾಗುವುದು. ಬಯಪಾದಿಂದ ಮಂಜೂರಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತಾ.ಪಂ. ನೂತನ ಸದಸ್ಯೆ ಭಾಗ್ಯಮ್ಮಶಂಕರ್, ಚೈತ್ರನಾರಾಯಣಸ್ವಾಮಿ, ಗ್ರಾ.ಪಂ. ಮಾಜಿ ಸದಸ್ಯ ಮುನಿಕೆಂಪಣ್ಣ, ಕೇಶವಪ್ಪ, ಕೃಷ್ಣಪ್ಪ, ಮುನಿಶಾಮಣ್ಣ, ಮುನಿಚಿನ್ನಪ್ಪ, ಕೆ.ರಾಮಚಂದ್ರ, ಕೆ.ನಾರಾಯಣಸ್ವಾಮಿ, ವಿಜಯಪುರ ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ನಾರಾಯಣಪುರ ವಿ.ಬಚ್ಚೇಗೌಡ ಮತ್ತಿತರರು ಇದ್ದರು. ಕೆ.ವೆಂಕಟೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.