ADVERTISEMENT

‘ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 11:15 IST
Last Updated 18 ಸೆಪ್ಟೆಂಬರ್ 2013, 11:15 IST
‘ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಿ’
‘ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಿ’   

ವಿಜಯಪುರ: ‘ಮಹಿಳಾ ಸಂಘಗಳು ಧ್ಯೇಯವನ್ನು ಹೊಂದಿ ಅದನ್ನು ಸಾರ್ಥಕ ಪಡಿಸಿಕೊಳ್ಳಲು ಶ್ರಮಿಸಬೇಕು ’ಎಂದು ರಾಜ್ಯ ವಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ತಿಳಿಸಿದರು.

ಪಟ್ಟಣದ  ನೀಲಗಿರೀಶ್ವರ ಸಮು ದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ  ಕೆಂಪೇಗೌಡ ಮಹಿಳಾ ಒಕ್ಕಲಿಗ ಸಂಘದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಒಕ್ಕಲಿಗರ ಜನಾಂಗವು ಸಾರ್ವಜನಿಕವಾಗಿ ಸೇವೆ ಸಲ್ಲಿಸುವ ನಿಟ್ಟಿನಿಂದ  ಅನೇಕ ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಿ ಸಮಾಜಕ್ಕೆ ನೆರವಾಗುತ್ತಿದೆ. ಕ್ರೋಢೀ ಕರಿಸಿದ ಸದಸ್ಯತ್ವದ ಹಣವನ್ನು ಗ್ರಾಮೀಣ ಭಾಗದ ರೈತರ ನೆರವಿಗೆ ಉಪಯೋಗಿಸುವ ಉದ್ದೇಶ ಹೊಂದ ಲಾಗಿದೆ.

ಮಹಿಳಾ ಸಂಘಗಳು ಸ್ಥಳೀಯ ವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಇಲ್ಲಿನ ಜನಾಂಗದ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಸಹಾಯ ಸಂಘದ ಧ್ಯೇಯವಾಗಲಿ ಎಂದು ತಿಳಿಸಿದರು

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪ್ರೊ.ನಾಗರಾಜ್‌ ಮಾತನಾಡಿ, ಮಹಿಳಾ ಸಂಘಟನೆಗಳು ಸಮಾಜಕ್ಕೆ ಅಗತ್ಯ. ಮಹಿಳಾ ಸಂಘಟನೆಗಳು ಒಂದು ಶಕ್ತಿ ಯಾಗಿ ಕೆಲಸ ಮಾಡಬೇಕು. ಪ್ರತಿ ಕ್ಷೇತ್ರ ದಲ್ಲೂ ಮಹಿಳಾ ಸಂಘಟನೆಗಳ ಅವ ಶ್ಯಕತೆ ಇದೆ. ಮಹಿಳೆಯರಲ್ಲಿ  ಜಾಗೃತಿ ಮೂಡಿಸಬೇಕು. ಜನಾಂಗದ ಒಳಿತಿಗಾಗಿ, ಉನ್ನತಿಗಾಗಿ ಹೆಚ್ಚೆಚ್ಚು ಕಾರ್ಯಕ್ರಮ ಗಳು ಮೂಡಿ ಬಂದಷ್ಟು ಅದು ಮಹಿಳಾ ಜಾಗೃತಿಯ ಸಂಕೇತವಾಗು ತ್ತದೆ ಎಂದು ತಿಳಿಸಿದರು.

ಮಹಿಳಾ ಸಂಘದ ಅಧ್ಯಕ್ಷೆ ಪ್ರಭಾವತಿ ದೇವರಾಜ್‌ ಪ್ರಸ್ತಾವಿಕವಾಗಿ ಮಾತ ನಾಡಿ, ಜನಾಂಗದ ಅಭಿವೃದ್ಧಿಯ ದೃಷ್ಟಿ ಯಿಂದ ಪ್ರಾರಂಭವಾಗುವ ಸಂಘಗಳು ಪ್ರಾಮಾಣಿಕ ಮತ್ತು ನಿಸ್ವಾರ್ಥದಿಂದ ದುಡಿದಾಗ ಮಾತ್ರ ಸಂಘ ಉನ್ನತಿ ಹೊಂದುತ್ತದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಬಡ ವಿದ್ಯಾರ್ಥಿ ಗಳಿಗೆ ವ್ಯಾಸಂಗಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುವ ಸದುದ್ದೇಶವನ್ನು ತಮ್ಮ ಸಂಘ ಹೊಂದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಜಯಪುರ ಕೆಂಪೇಗೌಡ ಮಹಿಳಾ ಒಕ್ಕಲಿಗರ ಕಾರ್ಯಾಕಾರಿ ಮಂಡಳಿ ವತಿಯಿಂದ ತನುಷ್‌ ಎಂಬ ಎರಡೂ ಕಿಡ್ನಿ ವೈಫಲ್ಯ ಗೊಂಡಿರುವ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಒದಗಿಸಲಾಯಿತು.

ರಾಜ್ಯ ಒಕ್ಕಲಿಗರ  ಸಂಘದ ನಿರ್ದೇಶಕ ಬಿ.ಮುನೇಗೌಡ, ಎಸ್‌.ಕೃಷ್ಣಪ್ಪ, ಡಿ.ಸಿ.ಕೆ. ಕಾಳೇಗೌಡ, ಎಚ್‌.ಪಿಳ್ಳಾಂಜಿನಪ್ಪ, ಎಚ್‌ .ವಿ . ಅಶ್ವತ್ಥ್, ವಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಪ್ರೇಮಾ ನಾಗ ರಾಜಪ್ಪ, ಕಾರ್ಯದರ್ಶಿ ರಜನಿ ವೆಂಕ ಟೇಶ್‌, ಖಜಾಂಚಿ ಜ್ಯೋತಿ ಬಸವ ರಾಜ್‌ ಮತ್ತು ನಿರ್ದೇಶಕರು ಉಪಸ್ಥಿತರಿ ದ್ದರು.ಜ್ಯೋತಿ ಬಸವರಾಜ್‌ ಮತ್ತು ಕವಿತಾ ಪ್ರಾರ್ಥಿಸಿದರು. ಪ್ರೇಮಾ ನಾಗ ರಾಜ್‌ ನಿರೂಪಿಸಿದರು. ಜ್ಯೋತಿ ಬಸವರಾಜ್‌ ಸ್ವಾಗತಿಸಿ, ಭಾರತಿ ಮುನಿಕೃಷ್ಣಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.