ADVERTISEMENT

‘ಆಧುನಿಕತೆಯಿಂದ ಕುಸಿಯುತ್ತಿರುವ ಜನಪದ ಮೌಲ್ಯ’

ರಾಜ್ಯ ಮಟ್ಟದ ಜಾನಪದ, ಸಾಂಸ್ಕೃತಿಕ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:35 IST
Last Updated 17 ಸೆಪ್ಟೆಂಬರ್ 2013, 9:35 IST

ಚನ್ನಪಟ್ಟಣ:-  ಪ್ರಭಾವದಿಂದಾಗಿ ಇಂದು ಗ್ರಾಮೀಣ ಪ್ರದೇಶಗಳು ಪಟ್ಟಣಗಳಾಗಿ ಪರಿವರ್ತನೆ ಗೊಳ್ಳುತ್ತಿದ್ದು, ಇದರಿಂದ ಜಾನಪದ ಮೌಲ್ಯಗಳು ನಾಶ ವಾಗುತ್ತಿವೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಡಾ.ಬಾನಂದೂರು ಕೆಂಪಯ್ಯ ವಿಷಾದಿಸಿದರು.

ತಾಲ್ಲೂಕಿನ ಬೇವೂರಿನ ಉದಯ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪ ಡಿಸಿದ್ದ 5ನೇ ವರ್ಷದ ರಾಜ್ಯ ಮಟ್ಟದ ಜಾನಪದ, ಸಾಂಸ್ಕೃತಿಕ ಸಮಾ ವೇಶ ಹಾಗೂ ಸನ್ಮಾನ ಸಮಾರಂಭ ವನ್ನು ನಗಾರಿ ಬಾರಿಸು ವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಸಮೂಹ ನಮ್ಮ ಪೂರ್ವಿಕರು ಕಟ್ಟಿಕೊಟ್ಟಿರುವ ಜಾನಪದ ಕಲೆ, ಹಾಡುಗಾರಿಕೆಯನ್ನು ಮರೆತು ಸಿನಿಮಾ ಗೀತೆಗಳ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದರಿಂದ ಜಾನಪದ ಕಲೆಗೆ ಪೆಟ್ಟು ಬೀಳುತ್ತಿದೆ. ಇದಲ್ಲದೆ  ಜಾನಪದದ ಮೂಲ ವಾದ್ಯ ಪರಿಕರಗಳು ನಾಶ ವಾಗುತ್ತಾ ಪ್ಲಾಸ್ಟಿಕ್‌ ಮಯವಾಗುತ್ತಿವೆ. ಎಂದು ಆತಂಕ ವ್ಯಕ್ತಪಡಿಸಿದ ಅವರು, ಕಲಾವಿದರು ಮೂಲ ಚರ್ಮವಾದ್ಯ ಗಳೊಂದಿಗೆ ತಮ್ಮ ಹಾಡುಗಾರಿಕೆ ಕಲಾ ಪ್ರದರ್ಶನ ಮಾಡುವುದರ ಮೂಲಕ ಜಾನಪದ ಕಲೆ, ಜನಪದ ವಾದ್ಯ ಪರಿಕರಗಳನ್ನು ಉಳಿಸಿ ಬೆಳೆಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ವಕೀಲ ಎಂ.ಎಸ್. ಮುಕರಮ್ ಮಾತನಾಡಿ, ಸಂಘ-ಸಂಸ್ಥೆಗಳು ನಮ್ಮ ತಾಯಿ ಬೇರಾದ ಜಾನಪದ ಕಲೆ, ಹಾಡುಗಾರಿಕೆಯನ್ನು ಜೀವಂತವಾಗಿ ಉಳಿಸಿ ಬೆಳೆಸಲು ಕಲಾವಿದರಿಗೆ ವೇದಿಕೆಗಳನ್ನು ಕಲ್ಪಿಸಿ ಕೊ ಡುತ್ತಿರುವುದು ಶ್ಲಾಘನೀಯ. ಕಲಾವಿದ ಉಳಿದರೆ ಕಲೆ ಉಳಿಯುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾ ರ ಸಾಂಸ್ಕೃತಿಕ ಚಟುವಟಿಕೆಗಳನ್ನು  ಹೆಚ್ಚು ಹೆಚ್ಚಾಗಿ ನಡೆಸುತ್ತಾ ಜನರ ಬಳಿಗೆ ಕೊಂ ಡ್ಯೊಯ್ಯುತ್ತಿರುವ ಇಂತಹ ಸಂಸ್ಥೆಗಳಿಗೆ ವಿಶೇಷ ಒತ್ತು ನೀಡಿ ಪ್ರೋತ್ಸಾಹಿಸುವುದು ಅತ್ಯವಶ್ಯಕ ಎಂದರು.

ಮುಖ್ಯ ಅತಿಥಿಗಳಾಗಿ ಯುವ ಮುಖಂಡ ನಾಗೇಂದ್ರರಾಜೇಅರಸ್, ವೀರಶೈವ ಕ್ರಿಯಾವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರೇಣುಕಾಪ್ರಸಾದ್, ಒಕ್ಕಲಿಗರ ಸಾರ್ವಜನಿಕ ನಿಲಯದ ಖಜಾಂಚಿ ಎಂ.ಸಿ.ಮಲ್ಲಯ್ಯ, ಟ್ರಸ್ಟ್‌ನ ಅಧ್ಯಕ್ಷೆ ಹೆಚ್.ಎಂ.ರೂಪ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಯೋಗೇಶ್, ಗ್ರಾ.ಪಂ. ಅಧ್ಯಕ್ಷ ಮಹೇಶ್, ಸದಸ್ಯರಾದ ಸಿದ್ದರಾಜು, ವಿನಯ್‌ಕುಮಾರ್, ತಾರಾ ಪ್ರಸಾದ್ ಮುಂತಾದವರು ಭಾಗ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಬೇವೂರು ಸಿದ್ದರಾಮೇಶ್ವರ ಪ.ಪೂ.ಕಾಲೇಜು ಪ್ರಾಂಶುಪಾಲ ಡಿ.ಸಿ.ಸುರೇಶ್, ನಿವೃತ್ತ ಶಿಕ್ಷಕ ಬಿ.ಎಸ್.ಸಿದ್ದೇಗೌಡ, ಸಾಹಿತಿ ಸುರೇಶ್‌ಗೌತಮ್, ಗಾಯಕ ಚಂದ್ರ ಶೇಖರ್, ಕಲಾವಿದರಾದ ಗೋವಿಂದ ಯ್ಯ, ಯೋಗೇಶ್, ಸಂತೋಷ್ ಮುಂತಾದವರನ್ನು ಸನ್ಮಾನಿಸಲಾಯಿತು.

ಗಾಯಕರಾದ ಚಂದ್ರು, ಹೊನ್ನಿ ಗನಹಳ್ಳಿ ಸಿದ್ದರಾಜಯ್ಯ, ಬ್ಯಾಡರಹಳ್ಳಿ ಶಿವಕುಮಾರ್, ಬೇವೂರು ರಾಮಯ್ಯ, ತಂಬೂರಿ ರಾಜಮ್ಮ, ಸಿದ್ದರಾಜು ರಾಂಪುರ, ಹೆಚ್.ಎಸ್. ಸರ್ವೋತ್ತಮ್, ಅಪ್ಪಗೆರೆ ಸತೀಶ್, ನಾರಾಯಣಮ್ಮ, ಶಾರದಾ ನಾಗೇಶ್ ಮುಂತಾದವರು ಜಾನಪದ ಗೀತಗಾಯನ ನಡೆಸಿ ಕೊಟ್ಟರು.

ವಿವಿಧ ಕಲಾತಂಡಗಳಿಂದ ಪೂಜಾ ಕುಣಿತ, ವೀರಗಾಸೆ ಕುಣಿತ, ಕೋಲಾಟ, ಜಾನಪದ ನೃತ್ಯ, ಭರತನಾಟ್ಯ, ಸೋಬಾನೆ ಪದ, ಯೋಗಪ್ರದರ್ಶನ, ರಂಗಭೂಮಿ ಕಲಾವಿದರಿಂದ ರಂಗಗೀತೆಗಳ ಗಾಯನ, ಕನಕಪುರದ ಗಂಗಾಧರ್ ತಂಡದಿಂದ ಮ್ಯಾಜಿಕ್ ಷೋ, ಸೋಬಾನೆ ಪದ, ತತ್ವಪದಗಳ ಹಾಡುಗಾರಿಕೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.