ADVERTISEMENT

‘ಪೆರಿಯಾರ್‌ ಆದರ್ಶ ಇಂದಿಗೂ ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 10:44 IST
Last Updated 19 ಸೆಪ್ಟೆಂಬರ್ 2013, 10:44 IST

ಆನೇಕಲ್‌:: ಪೆರಿಯಾರ್‌ ರಾಮಸ್ವಾಮಿ ರಾಜಕೀಯ ಸಮಾನತೆಗಾಗಿ ಹೋರಾ ಟ ನಡೆಸಿದ ಮಹಾನ್ ಚೇತನ ಎಂದು ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯಘಟಕದ ಅಧ್ಯಕ್ಷ ಜಿಗಣಿ ಶಂಕರ್‌ ನುಡಿದರು.

ತಾಲ್ಲೂಕಿನ ಸರ್ಜಾಪುರದಲ್ಲಿ ಕರ್ನಾ ಟಕ ರಿಪಬ್ಲಿಕ್ ಸೇನೆ ವತಿಯಿಂದ ಆಯೋ ಜಿಸಿದ್ದ ಪೆರಿಯಾರ್‌ ಅವರ 134ನೇ ಜನ್ಮದಿನಾಚರಣೆ ಕಾರ್ಯ ಕ್ರಮದಲ್ಲಿ ಪಾಲ್ಗೊಗಂಡು ಮಾತನಾಡಿದರು.

‘ಅಸ್ಪೃಶ್ಯತೆ, ಬಾಲ್ಯವಿವಾಹ ಸೇರಿ ದಂತೆ ವಿವಿಧ ಕಂದಾಚಾರಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದರು. ಪೆರಿಯಾರ್‌ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಉಪನ್ಯಾಸಕ ಶೀಶೈಲ ಮಸೂತೆ ಮಾತನಾಡಿ, ‘ಸಹಭೋಜನ, ಸಹ ಚಿಂತನೆಗಳಲ್ಲಿ ಎಲ್ಲರನ್ನೂ ತೊಡ ಗಿಸಿಕೊಂಡು ಸಮಾನತೆಯನು್ನ ಸಾರಿದ ಪೆರಿಯಾರ್‌ ಅವರು ದ್ರಾವಿಡ ನಾಡಿನಲ್ಲಿ ನವೀನ ಚಿಂತ ನೆಗಳನ್ನು ಪ್ರಚಾರ ಮಾಡಿದರು. ಆಂಗ್ಲ ಭಾಷೆಯ ವಿರೋಧಿಸಿ ಆಂದೋ ಲನವನ್ನು ಮಾಡಿದರು. ಮಾತೃಭಾಷೆಗೆ ಮಹತ್ವ ನೀಡಿದ್ದರು ಎಂದರು.

ಬೌದ್ಧ ಬಿಕ್ಷುಕ ಮಾಂತೇಶ ಬಂತೇಜೀ, ನೆರಿಗಾ ಗಾ್ರಪಂ ಮಾಜಿ ಅಧ್ಯಕ್ಷ ಶೀ್ರನಿ ವಾಸರೆಡ್ಡಿ, ಆನೇಕಲ್‌ ಅಶ್ವತ್ಥ್‌ ನಾರಾ ಯಣ, ಮುಳೂ್ಳರು ಶೀ್ರನಿವಾಸ್‌, ಜಿಗಳ ತಿಮ್ಮರಾಯಪ್ಪ, ಸರ್ಜಾಪುರ ಗೋಪಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.