ADVERTISEMENT

‘ಮೌಢ್ಯ ಬಿತ್ತುವ ಟಿವಿ ಮಾಧ್ಯಮಗಳು’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 7:18 IST
Last Updated 1 ಆಗಸ್ಟ್ 2016, 7:18 IST
ದೊಡ್ಡಬಳ್ಳಾಪುರದ ನಗರದ ಒಕ್ಕಲಿಗರ ಸಮುದಾಯು ಭವನದಲ್ಲಿ ಭಾನುವಾರ ನಡೆದ ‘ದುಡಿಯೋರ ಜನಸಂಘರ್ಷ ವಿಶೇಷಾಂಕ’ ಬಿಡುಗಡೆ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ, ಡಿವೈಎಸ್ಪಿ ಟಿ.ಕೋನಪ್ಪರೆಡ್ಡಿ ಅವರನ್ನು ಅಭಿನಂದಿಸಲಾಯಿತು. ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದ ನಗರದ ಒಕ್ಕಲಿಗರ ಸಮುದಾಯು ಭವನದಲ್ಲಿ ಭಾನುವಾರ ನಡೆದ ‘ದುಡಿಯೋರ ಜನಸಂಘರ್ಷ ವಿಶೇಷಾಂಕ’ ಬಿಡುಗಡೆ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ, ಡಿವೈಎಸ್ಪಿ ಟಿ.ಕೋನಪ್ಪರೆಡ್ಡಿ ಅವರನ್ನು ಅಭಿನಂದಿಸಲಾಯಿತು. ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮತ್ತಿತರರು ಭಾಗವಹಿಸಿದ್ದರು.   

ದೊಡ್ಡಬಳ್ಳಾಪುರ: ಟಿವಿ ಮಾದ್ಯಮಗಳಲ್ಲಿ ಎಗ್ಗಿಲ್ಲದೆ ಪ್ರಸಾರ ವಾಗುವ ಜೋತಿಷ್ಯ ಕಾರ್ಯಕ್ರಮಗಳು ಜನಗಳಲ್ಲಿ ಮೌಢ್ಯಗಳನ್ನು ಬಿತ್ತುತ್ತಿವೆ. ಇದರ ಪರಿಣಾಮ ಸಮಾಜಿಕವಾಗಿ ವ್ಯಕ್ತಿಗಳಲ್ಲಿ ಸ್ವಂತ ಶಕ್ತಿ ಕುಂದುತ್ತಿದೆ. ಇದರಿಂದ ದೆೇಶದ ಅಭಿವೃದ್ದಿಯಲ್ಲಿ ಕುಂಠಿತವಾಗುವಲ್ಲಿ ದುಷ್ಪರಿಣಾಮ ಬೀರುತ್ತದೆ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಹೇಳಿದರು.

ಅವರು ಒಕ್ಕಲಿಗರ ಸಮುದಾಯು ಭವನದಲ್ಲಿ ಭಾನುವಾರ ನಡೆದ ‘ದುಡಿಯೋರ ಜನಸಂಘರ್ಷ ವಿಶೇಷಾಂಕ’ ಬಿಡುಗಡೆ ಮತ್ತು ಇಬ್ಬರು ಸಾಧಕರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಿವೃತ್ತ ಪ್ರಾಧ್ಯಾಪಕ ಪ್ರೋ.ಎಂ.ಜಿ. ಚಂದ್ರಶೇಖರಯ್ಯ, ಡಿವೈಎಸ್ಪಿ ಟಿ. ಕೋನಪ್ಪರೆಡ್ಡಿ ಅವರನ್ನು ಅಭಿನಂದಿಸಲಾಯಿತು.

ಜನಸಂಘರ್ಷ ಪತ್ರಿಕೆ ಸಂಪಾದಕ ಮುನಿಕೃಷ್ಣ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ನಿವೃತ್ತ ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ, ಪ್ರಗತಿಪರ ಚಿಂತಕ ಅದ್ದೆ ಮಂಜುನಾಥ್,  ಜಿ.ಪಂ ಸದಸ್ಯ ಎಚ್‌.ಅಪ್ಪಯಣ್ಣ, ರಾಜ್ಯ ಸರ್ಕಾರಿ ಎಸ್.ಸಿ,ಎಸ್ಟಿ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ನಗರಸಭೆ ತ.ನ.ಪ್ರಭುದೇವ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಹನುಮಂತೇಗೌಡ,

ಬಿಜೆಪಿ ತಾ. ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಹಿರಿಯ ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ,  ತಾ. ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಜಿ.ಲಕ್ಷ್ಮೀಪತಿ,  ಜಿ.ಪಂ ಮಾಜಿ ಸದಸ್ಯ ಎ.ನರಸಿಂಹಯ್ಯ,

ಎಸ್.ಎಸ್.ಘಾಟಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಸ್.ಪದ್ಮನಾಭ್, ನಗರಸಭಾ ಸದಸ್ಯ ವಡ್ಡರಹಳ್ಳಿ ರವಿ, ಟಿಎಪಿಎಂಸಿಎಸ್ ನಿರ್ದೇಶಕರಾದ ಲಕ್ಷ್ಮಿನಾರಾಯಣ್, ಅಂಜನೇಗೌಡ, ಆನಂದ್, ಮುಖಂಡರಾದ ರಾಜಣ್ಣ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT