ADVERTISEMENT

‘ರಾಜಕೀಯ ಧ್ರುವೀಕರಣ ಆಗಲಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 5:45 IST
Last Updated 2 ಜನವರಿ 2014, 5:45 IST

ಆನೇಕಲ್‌: ಶೋಷಿತ ಸಮು ದಾಯದವರು ದೇಶದ ಅಧಿ ಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಅಂಬೇಡ್ಕರ್‌ ಅವರ ಆಸೆ ಈಡೇರಬೇಕಾದರೆ ರಾಜಕೀಯ ಧ್ರುವೀಕರಣವಾಗಬೇಕು ಎಲ್ಲಾ ಶೋಷಿತರು ಒಗ್ಗೂಡಬೇಕು ಎಂದು ಸರ್ವಜನ ಸಮಾಜ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್‌ ನುಡಿದರು.

ಅವರು ಪಟ್ಟಣದ ಶ್ರೀರಾಮ ಕುಟೀರದಲ್ಲಿ ಸರ್ವಜನ ಸಮಾಜ ವೇದಿಕೆ ಮತ್ತು ಪ್ರಜಾ ಪರಿವರ್ತನ ವೇದಿಕೆ ವತಿಯಿಂದ ಆಯೋಜಿ ಸಿದ್ದ ಕೋರೆಗಾಂವ್‌ ಯುದ್ಧ 195ನೇ ದಿನಾಚರಣೆ ಕಾರ್ಯ ಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮೀಸಲಾತಿಯಿಂದ ಗೆದ್ದ ಶಾಸ ಕರು ಶೋಷಿತರ ಪರವಾಗಿ ದನಿ ಎತ್ತುತ್ತಿಲ್ಲ ಹಾಗಾಗಿ ಮುಂಬ ರುವ ವಿಧಾನಸಭಾ ಚುನಾವಣೆ ಯಲ್ಲಿ ಅಂಬೇಡ್ಕರ್‌ ಪರ ಚಿಂತನೆ ಯುಳ್ಳ ಕನಿಷ್ಟ 50ಶಾಸಕರನ್ನು ರಾಜ್ಯದಲ್ಲಿ ಗೆಲ್ಲಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯ ಬೇಕು ಎಂದರು.

ಪ್ರಜಾ ವಿಮೋಚನಾ ಚಳವಳಿ (ಸಮತವಾದ) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ, ಪಿವಿಸಿ(ಎಂ) ಸಂಘಟ ನೆಯ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾಗರಾಜು, ಪ್ರಧಾನ ಕಾರ್ಯದರ್ಶಿಆದೂರುಪ್ರಕಾಶ್‌, ಡಿಎಸ್‌ಎಸ್‌ನ ಅಣ್ಣಯ್ಯ, ಮುಖಂಡರಾದ ಮುರಳಿ, ಬಿ. ಮಹದೇವ್‌, ಪಟಾಪಟ್‌ ಪ್ರಕಾಶ್‌, ಸಿ.ರಾವಣ, ಗೌತಮ್‌ ವೆಂಕಿ, ಸರ್ಜಾಪುರ ಗ್ರಾಪಂ ಅಧ್ಯಕ್ಷ ಸದ್ದಾಂ, ಹುಸ್ಕೂರು ಮದ್ದೂ ರಪ್ಪ, ಮಾಯಸಂದ್ರ ಸಂಪಂಗಿ, ಮರಸೂರು ಯಲ್ಲಪ್ಪ, ಕರವೇ ರಾಜ್ಯ ಉಪಾಧ್ಯಕ್ಷ ಪುನೀತ್‌, ಚಂದಾ ಪುರ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಎಂ.ಆರ್‌ .ಯಲ್ಲಪ್ಪ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.