ADVERTISEMENT

‘ಹಳ್ಳಿಗಳ ಸಾಂಸ್ಕೃತಿಕ ಹಿತ ಕಾಪಾಡುವುದು ಅವಶ್ಯ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:02 IST
Last Updated 23 ಸೆಪ್ಟೆಂಬರ್ 2013, 10:02 IST

ದೊಡ್ಡಬಳ್ಳಾಪುರ: ‘ಸಾಂಸ್ಕೖತಿಕ ಹಿತಾ ಸಕ್ತಿಯನ್ನು ಪ್ರೋತ್ಸಾಹಿಸುವ ಚಿಂತನೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು  ನಡೆ ಯಬೇಕಾಗಿದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕನ್ನಡ ಜಾಗೃತ ಭವನದಲ್ಲಿ ನಡೆದ ಸಾಂಸ್ಕೖತಿಕ ಸೌರಭ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೖತಿಕ ಸಂಘಟನೆಗಳು ಮಹತ್ವದ ಹೊಣೆ ಗಾರಿಕೆ ಹೊಂದಿದ್ದು ಅವುಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ನಗರಸಭಾ ಸದಸ್ಯ ತ.ನ.ಪ್ರಭು ದೇವ್ ಮಾತನಾಡಿ, ಮಕ್ಕಳ ಸುಪ್ತಪ್ರತಿಭೆಗೆ ಸೂಕ್ತ ಮಾರ್ಗ ದರ್ಶನವನ್ನು ಸಾಂಸ್ಕೃತಿಕ ವೇದಿಕೆಗಳು ಒದಗಿಸಿಕೊಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯದರ್ಶಿ ರೇವತಿ ಅನಂತ ರಾಂ ಮಾತನಾಡಿದರು. ಹಿರಿಯ ಪತ್ರ ಕರ್ತ ಪಿ.ಜಿ.ಸುಬ್ಬರಾವ್, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಕೆ.ಆರ್.ರವಿಕಿರಣ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಸಹಾಯಕ ನಿರ್ದೇ ಶಕಿ ಸುಶೀಲಮ್ಮ, ತಾಲ್ಲೂಕು ಪಂಚಾ ಯಿತಿ ಸದಸ್ಯ ಡಾ.ಎಚ್.ಜಿ. ವಿಜಯ ಕುಮಾರ್ ,ಕಾಂಗ್ರೆಸ್ ಬ್ಲಾಕ್‌ ಸಮಿತಿ ಕಾರ್ಯ ದರ್ಶಿ ಡಿ.ವಿ. ಅಶ್ವತ್ಥಪ್ಪ, ಜಿ.ಲಕ್ಷ್ಮೀಪತಿ, ಐಟಿ ಉದ್ಯೋಗಿ ಸಿ. ವಿಜಯ್, ಭರತ ನಾಟ್ಯ ಕಲಾವಿದೆ ಬಿ.ಎ.ಅಭಿನೇತ್ರಿ, ಸಂಘದ ವ್ಯವಸ್ಥಾಪಕ ಬಿ.ಅನಂತರಾಂ, ವಿಜಯಲಕ್ಷ್ಮೀ ವೆಂಕಟ ರಮಣಯ್ಯ, ಗೋವಿಂದಪ್ಪ, ರಮೇಶ್ ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಅಭಿನೇತ್ರಿ ಸಾಂಸ್ಕೖತಿಕ ಸಂಘ ಮತ್ತು ಭಾರತ ಸೇವಾದಳದ ನೇತೖತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.