ADVERTISEMENT

539 ಎಕರೆ ಒತ್ತುವರಿಗೆ ಕಾರ್ಯಾಚರಣೆ ಆರಂಭ

ಎಸ್‌.ಆರ್‌.ಹಿರೇಮಠ ಅರ್ಜಿ ಪ್ರಭಾವ * ಅನಧಿಕೃತ ಬಡಾವಣೆಗಳ ತೆರವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 9:09 IST
Last Updated 7 ಜನವರಿ 2014, 9:09 IST
ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಿ ಗಡಿ ರೇಖೆ ನಿರ್ಮಿಸುವ ಕಾರ್ಯ ಸೋಮವಾರ ಆರಂಭವಾಯಿತು
ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಿ ಗಡಿ ರೇಖೆ ನಿರ್ಮಿಸುವ ಕಾರ್ಯ ಸೋಮವಾರ ಆರಂಭವಾಯಿತು   

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಮೀಪದ ಭೂತಾನಹಳ್ಳಿ ಯಲ್ಲಿ ಒತ್ತುವರಿ ಮಾಡಿದ್ದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ತೆರ ವುಗೊಳಿಸಲು ಅರಣ್ಯ, ಪೊಲೀಸ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ಆರಂಭಿಸಿದರು.
ಸಮಾಜ ಪರಿವರ್ತನಾ ಸಮುದಾ ಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರು ಅರಣ್ಯ ಒತ್ತುವರಿ ಸಂಬಂಧ ಹೈಕೋರ್ಟ್‌ ಮೊರೆ ಹೋಗಿದ್ದ ಹಿನ್ನೆಲೆ ಯಲ್ಲಿ ಈ ಭೂಮಿ ತೆರವುಗೊಳಿಸ ಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ  ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಕಾರ್ಯಾ ಚರಣೆ ಪ್ರಾರಂಭವಾಗಿದೆ.
ಭೂತಾನಹಳ್ಳಿಯ 67, 68, 69, 70ನೇ  ಸರ್ವೆ ನಂಬರ್‌ ಗಳಲ್ಲಿ  539.27ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ.

ಭೂತಾನಹಳ್ಳಿಗೆ ಸಮೀಪದ ದಾಖಲೆ ಗ್ರಾಮಗಳಾದ ಬ್ಯಾಲದ ಮರದ ದೊಡ್ಡಿ, ತಿಮ್ಮಯ್ಯನ ದೊಡ್ಡಿ ಗ್ರಾಮಗಳಲ್ಲಿ ಒತ್ತು ವರಿಯಾ ಗಿರುವ ಅರಣ್ಯ ಭೂಮಿ ಯನ್ನು ಪೊಲೀಸ್‌ ಬಿಗಿ ಬಂದೋಬಸ್‌್ತನಲ್ಲಿ ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಸದ್ಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದು ಇಲ್ಲಿ ಬಡಾವಣೆ ನಿರ್ಮಾಣ ಮಾಡ ಲಾಗಿದೆ.

ಅಧಿಕಾರಿಗಳು ತೆರವುಗೊಳಿಸಲು ಭೂತಾನಹಳ್ಳಿಗೆ ಬಂದಾಗ ಸ್ಥಳೀಯ ನಿವಾಸಿಗಳು ಗ್ರಾಮದ ತೆರವಿಗೆ ಅಡ್ಡಿ ಪಡಿಸಿದರು. ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯ 182ಎಕರೆ ಭೂಮಿ ವಿವಾದ ನ್ಯಾಯಾಲಯದಲ್ಲಿದೆ. ಈ ಸಂಬಂಧ ಹೈಕೋರ್ಟ್‌ ತಡೆಯಾಜ್ಞೆ ಸಹ ಇದೆ. ರೈತರಿಗೆ ಜಮೀನನ್ನು ನೀಡ ಬೇಕು. ಮನೆ ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ತೊಂದರೆ ಮಾಡಬಾರದು ಎಂದು ಒತ್ತಾಯಿಸಿ ದರು.

ಸಾರ್ವಜನಿಕರ ಬೇಡಿಕೆಯನ್ನು ಆಲಿ ಸಿದ ನಗರ ಜಿಲ್ಲಾ ಉಪಅರಣ್ಯ ಸಂರಕ್ಷ ಣಾಧಿಕಾರಿ ಮಂಜುನಾಥ್‌, ‘ಹೈಕೋ ರ್ಟ್‌ ಆದೇಶವನ್ನು ಮೀರುವಂತಿಲ್ಲ. ಸರ್ಕಾರ ಈ ಭೂಮಿಯನ್ನು 1934ರ ಲ್ಲಿಯೇ ಕಾಯ್ದಿಟ್ಟ ಅರಣ್ಯ ಪ್ರದೇಶ ಎಂದು ಘೋಷಿಸಿದೆ. ಈ ಸಂಬಂಧ ಹಿರೇಮಠ ಹೋರಾಟ ಮಾಡುತ್ತಿ ದ್ದಾರೆ. ನ್ಯಾಯಾಲಯದಲ್ಲಿ ತೆರವು ಗೊಳಿಸುವಂತೆ ಆದೇಶಿಸಿದೆ’ ಎಂದು ವಿವರಿಸಿದರು.

ಈ  ವೇಳೆ ಮಧ್ಯ ಪ್ರವೇಶಿಸಿದ ಎಪಿ ಎಂಸಿ ಉಪಾಧ್ಯಕ್ಷ ಬನ್ನೇರು ಘಟ್ಟ ಜಯರಾಮ್ ಅವರು, 182 ಎಕರೆ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವ ದಾಖಲೆ ಸಲ್ಲಿಸಿದರು. ಅನಂತರ ಈ ಭೂಮಿ ಯನ್ನು ಬಿಟ್ಟು 357.27ಎಕರೆ ಭೂಮಿ ಸುತ್ತ ಗಡಿ ಕಾಲುವೆ ತೆರೆ ಯಲು ಅಧಿಕಾರಿಗಳು ಪ್ರಾರಂಭಿಸಿದರು.

ಗ್ರಾಮದ ಕೃಷ್ಣಪ್ಪ ಮಾತನಾಡಿ, ‘ಹಲವು ವರ್ಷಗಳಿಂದ ಇಲ್ಲಿಯೇ ವಾಸ ವಿದ್ದೇವೆ. ಭೂಮಿಯನ್ನು ಉಳುಮೆ ಮಾಡಿ ಜೀವನ ಮಾಡುತ್ತಿದ್ದೇವೆ.  ನಮ್ಮನ್ನು ಇಲ್ಲಿಯೇ ಉಳಿ ಯಲು ಬಿಡಿ’ ಎಂದು ಅಲವತ್ತುಕೊಂಡರು.

ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿಗಳಾದ ವೆಂಕಟೇಶ್‌, ಲಕ್ಷ್ಮೀ ನಾರಾ ಯಣ, ವಲಯ ಅರಣ್ಯಾಧಿಕಾರಿಗ ಳಾದ ಜವರೇಗೌಡ, ವಿಜಯ್‌ ಕು ಮಾರ್‌, ನಾಗರಾಜು, ಡಿವೈಎಸ್ಪಿ ಬಲರಾಮೇಗೌಡ, ಪೊಲೀಸ್‌ ವೃತ್ತ ನಿರೀಕ್ಷಕರಾದ ಬಿ.ಕೆ.ಕಿಶೋರ್‌ ಕುಮಾರ್‌, ರಾಜೇಂದ್ರ, ಪಿಎಸ್‌ಐ ಗಳಾದ ಶಶಿಧರ್, ಚೇತನ್‌ಕುಮಾರ್‌, ರಾಘವೇಂದ್ರ ಬೈಂದೂರು, ಉಮಾ ಶಂಕರ್‌, ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.