ADVERTISEMENT

ಇಂದು ಹುಲುಕುಡಿ ವೀರಭದ್ರಸ್ವಾಮಿ ರಥೋತ್ಸವ

ನಟರಾಜ ನಾಗಸಂದ್ರ
Published 24 ಜನವರಿ 2018, 10:17 IST
Last Updated 24 ಜನವರಿ 2018, 10:17 IST
ಬೆಟ್ಟದ ಮೇಲಿರುವ ಕುಡಿಯುವ ನೀರಿನ ಪುಷ್ಕರಣಿ
ಬೆಟ್ಟದ ಮೇಲಿರುವ ಕುಡಿಯುವ ನೀರಿನ ಪುಷ್ಕರಣಿ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲುಕುಡಿ ಕ್ಷೇತ್ರದಲ್ಲಿ ಜನವರಿ 24ರ ಮಧ್ಯಾಹ್ನ 12ಕ್ಕೆ ವೀರಭದ್ರಸ್ವಾಮಿ ರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯಲಿರುವ ಸಮಾರಂಭದ ಸಾನ್ನಿಧ್ಯ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ.

ಬೆಟ್ಟಗುಡ್ಡಗಳಿಂದ ಕೂಡಿರುವ ಮತ್ತು ಪೌರಾಣಿಕ ಹಿನ್ನೆಲೆಯ ಮಹತ್ವದ ಸ್ಥಳವಾಗಿರುವ ಹುಲುಕುಡಿ ಕ್ಷೇತ್ರ ಪುರಾಣದ ಕಾಲದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಇವರ ಶಿಷ್ಯರು ಒಂದು ಹುಲ್ಲುಕಡ್ಡಿ ತಿಂದು ದೇಹವನ್ನು ನಿಗ್ರಹಿಸುತ್ತಿದ್ದರು. ಇಲ್ಲಿನ ಔಷಧಿ ಗುಣವುಳ್ಳ ಹುಲ್ಲು ದನಕರುಗಳ ಆರೋಗ್ಯಕ್ಕೆ ಒಳ್ಳೆಯದು. ಈ ಕಾರಣಗಳಿಂದ ಈ ಕ್ಷೇತ್ರಕ್ಕೆ ಹುಲುಕುಡಿ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಈ ಭಾಗದ ಹಿರಿಯರು.

1,600 ವರ್ಷಗಳ ಹಿಂದೆ ರಾಜ ಕೃಷ್ಣವರ್ಮನ ಆಳ್ವಿಕೆಲ್ಲಿದ್ದ ಪುಲುಕುಡಿ ಮಂತ್ರಿ ಇಲ್ಲಿನ ದೇವಾಲಯಗಳ ನಿರ್ಮಾಣಕ್ಕೆ ಕಾರಣನಾಗ್ದಿದು, ಈತನ ಹೆಸರೇ ಹುಲುಕುಡಿಯಾಗಿರಬಹುದು ಎಂದೂ ಹೇಳಲಾಗುತ್ತದೆ.

ADVERTISEMENT

ಬೆಟ್ಟದ ಮೇಲೆ ವೀರಭದ್ರಸ್ವಾಮಿ ದೇವಾಲಯವಿದೆ. ಬೆಟ್ಟದ ಮೇಲೆ ಅಗಸ್ತ್ಯ ಮುನಿಗಳು ತಪಸ್ಸು ಮಾಡ್ದಿದ ಸ್ಥಳ, ವೀರಭದ್ರಸ್ವಾಮಿ, ಭದ್ರಕಾಳಮ್ಮ, ಬಸವಣ್ಣ ದೇವಾಲಯಗಳಿವೆ. ಸುಂದರವಾದ ನೀರಿನ ಕೊಳಗಳಿವೆ.ಇದರೊಂದಿಗೆ ಕ್ಷೇತ್ರದ ಸುತ್ತ ಒಟ್ಟು ಹನ್ನೊಂದು ದೇವಾಲಯಗಳ್ದಿದು, ಇವುಗಳ ಜೀರ್ಣೋದ್ಧಾರಗಳು ನಡೆದಿವೆ. ಸುಮಾರು 8 ಕಿ.ಮೀ.ಇರುವ ಇವುಗಳನ್ನು ಪ್ರದಕ್ಷಿಣೆ ಹಾಕುವ ವ್ಯವಸ್ಥೆ ಮಾಡಲಾಗಿದೆ.

ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ಇಲ್ಲಿ ಮಹಾದ್ವಾರ ನಿರ್ಮಾಣ, ಬೆಟ್ಟಕ್ಕೆ ಭಕ್ತಾಧಿಗಳು ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಾಸುಗಳ ಜಾತ್ರೆ ನಡೆಯಲ್ದಿದು, ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ.

ಭಕ್ತರಿಗೆ ಅನ್ನಸಂತರ್ಪಣೆ

ಪ್ರತಿ ವರ್ಷವೂ ರಥ ಸಪ್ತಮಿಯ ದಿನದಂದು ರಥೋತ್ಸವ ಸಂದರ್ಭದಲ್ಲಿ ಜಾತ್ರೆಗೆ ಬರುವ ಸಾವಿರಾರು ಜನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಸೀಗೇಪಾಳ್ಯ ಬಸವರಾಜಯ್ಯ ಸಹೋದರರು ನಡೆಸುತ್ತ ಬಂದಿದ್ದಾರೆ.

ರಥೋತ್ಸವದ ಪ್ರಯುಕ್ತ ದೊಡ್ಡಬಳ್ಳಾಪುರ ನಗರದ ಹಳೇ ಬಸ್‌ ನಿಲ್ದಾಣದಿಂದ ಹುಲುಕುಡಿ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್‌ ಸೌಕರ್ಯದ ವ್ಯವಸ್ಥೆಯನ್ನು ಕಲ್ಪಿಸಲಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.