ADVERTISEMENT

ದೊಡ್ಡಬಳ್ಳಾಪುರ: 7 ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:38 IST
Last Updated 8 ಆಗಸ್ಟ್ 2021, 4:38 IST
ಆರ್.ಎಲ್. ಜಾಲಪ್ಪ ಕಾಲೇಜಿನ ವಿದ್ಯಾರ್ಥಿನಿ ಜವೇರಿಯಾ ಫಾತಿಮಾ ಅವರನ್ನು ಅಭಿನಂದಿಸಲಾಯಿತು
ಆರ್.ಎಲ್. ಜಾಲಪ್ಪ ಕಾಲೇಜಿನ ವಿದ್ಯಾರ್ಥಿನಿ ಜವೇರಿಯಾ ಫಾತಿಮಾ ಅವರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ:ನಗರದ ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಜವೇರಿಯಾ ಫಾತಿಮಾ ಏಳು ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಏಕಕಾಲಕ್ಕೆ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ವಿಜಯ ನಗರದವರಾದ ಈಕೆ ಮೈಕ್ರೋಸಾಫ್ಟ್ ಕಂಪನಿಯಲ್ಲಿ ವಿದ್ಯಾರ್ಥಿ ಉದ್ಯೋಗ ರಾಯಭಾರಿಯಾಗಿಯೂ ಆಯ್ಕೆಯಾಗಿದ್ದಾರೆ. ಅಲ್ಲದೇ ಐಬಿಎಂ, ಆಕ್ಸೆಂಚರ್, ಮೈಂತ್ರಾ, ಎಚ್‍ಸಿಎಲ್, ಟಿಸಿಎಸ್, ನೋವ್‍ಬ್ರೋ ಕಂಪನಿಗಳು ಈ ಪ್ರತಿಭಾವಂತೆಗೆ ಉದ್ಯೋಗಾವಕಾಶ ನೀಡಿವೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿರುವ ಇವರು ಸೂಕ್ತ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.