ADVERTISEMENT

ಮಹಿಳಾ ಹಕ್ಕಿಗೆ ಹೋರಾಡಿದ ನಾಯಕ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:08 IST
Last Updated 7 ಡಿಸೆಂಬರ್ 2022, 5:08 IST
ವಿಜಯಪುರ ಪಟ್ಟಣದ ಟಿಪ್ಪುನಗರದಲ್ಲಿರುವ ಸಾವಿತ್ರಿ ಬಾಫುಲೆ ಟ್ರಸ್ಟ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು
ವಿಜಯಪುರ ಪಟ್ಟಣದ ಟಿಪ್ಪುನಗರದಲ್ಲಿರುವ ಸಾವಿತ್ರಿ ಬಾಫುಲೆ ಟ್ರಸ್ಟ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು   

ವಿಜಯಪುರ (ಬೆಂ.ಗ್ರಾಮಾಂತರ):ಪಟ್ಟಣದ ಟಿಪ್ಪು ನಗರದಲ್ಲಿರುವ ಸಾವಿತ್ರಿ ಬಾಫುಲೆ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು.‌

ಟ್ರಸ್ಟ್‌ನ ಸಂಸ್ಥಾಪಕಿ ಎಸ್. ರವಿಕಲಾ ಮಾತನಾಡಿ, ಮಹಿಳೆಯರಿಗೆ ಎಲ್ಲಾ ರೀತಿಯ ಹಕ್ಕುಗಳಿವೆ. ದೌರ್ಜನ್ಯಕ್ಕೆ ತುತ್ತಾದಾಗ ರಕ್ಷಣೆ ಇದೆ. ಆಸ್ತಿಯಲ್ಲಿ ಪಾಲಿದೆ. ಆದರೆ, ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು
ಅಂಬೇಡ್ಕರ್ ಎಂದು
ಹೇಳಿದರು.

ಬೌದ್ಧ ಧರ್ಮ ಸ್ವೀಕರಿಸಿದ ಅವರು ಸುಮಾರು 2.5 ಲಕ್ಷ ಕೃತಿಗಳನ್ನು ಓದುವ ಮೂಲಕ ಪ್ರತಿಯೊಂದು ಕೃತಿಗೆ ತನ್ನದೇ ಆದ ಟಿಪ್ಪಣಿ ಬರೆದಿಟ್ಟಿದ್ದರು. ಹೀಗಾಗಿ, ಅವರ ಆದರ್ಶ ಎಲ್ಲರಿಗೂ ಮಾದರಿಯಾಗಬೇಕು. ಶಿಕ್ಷಣದ ಮೂಲಕ ದೇಶದ ಸಮಸ್ಯೆ ಬಗೆಹರಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ADVERTISEMENT

ಟ್ರಸ್ಟ್ ಸದಸ್ಯರಾದ ರತ್ನಮ್ಮ, ಶೋಭಾ, ಮುನಿಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಪವಿತ್ರ, ಮೇರಿ, ಲಕ್ಷ್ಮಮ್ಮ, ಪುಷ್ಪಮ್ಮ, ಆದಿತ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.