ADVERTISEMENT

ಅಶಕ್ತರ ಸೇವೆಗೆ ಒತ್ತು ನೀಡಲು ಸಲಹೆ

ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್ ಆಫ್ ತೊಂಡೇಬಾವಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 5:40 IST
Last Updated 20 ಅಕ್ಟೋಬರ್ 2022, 5:40 IST
ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಆಫ್ ಆರ್.ಎಲ್. ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಪ್ರಾಯೋಜಿಸಿರುವ ಲಯನ್ಸ್ ಕ್ಲಬ್ ಆಫ್ ತೊಂಡೇಬಾವಿ ಉದ್ಘಾಟನಾ ಸಮಾರಂಭ ನಡೆಯಿತು
ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಆಫ್ ಆರ್.ಎಲ್. ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಪ್ರಾಯೋಜಿಸಿರುವ ಲಯನ್ಸ್ ಕ್ಲಬ್ ಆಫ್ ತೊಂಡೇಬಾವಿ ಉದ್ಘಾಟನಾ ಸಮಾರಂಭ ನಡೆಯಿತು   

ದೊಡ್ಡಬಳ್ಳಾಪುರ:ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್. ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಪ್ರಾಯೋಜಿಸಿರುವ ನೂತನ ಲಯನ್ಸ್ ಕ್ಲಬ್ ಆಫ್ ತೊಂಡೇಬಾವಿ ಉದ್ಘಾಟನೆ, ಸಂಸ್ಥಾಪನಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೇವಾ ಚಟುವಟಿಕೆ ಕಾರ್ಯಕ್ರಮ ನಗರದಲ್ಲಿ
ನಡೆಯಿತು.

ಅನುಷ್ಠಾನ ಅಧಿಕಾರಿಯಾಗಿ ಭಾಗವಹಿಸಿದ್ದ ಲಯನ್ಸ್‌ ಕ್ಲಬ್‌ನ ಎಂ. ಅಶ್ವತ್ಥಯ್ಯ ಮಾತನಾಡಿ, ಸಾಮಾಜಿಕ ಸೇವಾ ಕಾರ್ಯ ಸಂಘಟನೆಗಳ ಅವಿಭಾಜ್ಯ ಅಂಗವಾಗಬೇಕು. ಅಶಕ್ತ ಹಾಗೂ ಅವಶ್ಯಕತೆಯುಳ್ಳ ವಲಯಕ್ಕೆ ಸೇವೆ ಮೂಲಕ ನೆರವು ಒದಗಿಸುವುದು ಲಯನ್ಸ್ ಕ್ಲಬ್‌ನ ಧ್ಯೇಯವಾಗಿದೆ ಎಂದರು.

ಲಯನ್ ಜಿಲ್ಲೆಯ 317ಎಫ್‌ನ ಗರ್ವನರ್‌ ಬಿ.ಎಸ್. ರಾಜಶೇಖರಯ್ಯ ಮಾತನಾಡಿ, ಒಂದು ವರ್ಷದ ಹಿಂದೆಯಷ್ಟೇ ಪ್ರಾರಂಭವಾಗಿರುವ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್. ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ಪ್ರಸಕ್ತ ಸಾಲಿನಲ್ಲಿ ಎರಡು ಹೊಸ ಕ್ಲಬ್‌ಗಳನ್ನು ಪ್ರಾಯೋಜಿಸಿರುವುದು ಶ್ಲಾಘನೀಯ. ಸೇವಾ ಹಾಗೂ ಆಡಳಿತ ಚಟುವಟಿಕೆಯಲ್ಲಿ ಸ್ಥಾಪನೆಯಾದ ವರ್ಷವೇ ಅಗ್ರಸ್ಥಾನ ಪಡೆದಿದೆ ಎಂದು ಶ್ಲಾಘಿಸಿದರು.

ADVERTISEMENT

ಪ್ರಥಮ ಉಪ ಗರ್ವನರ್‌ ಬಿ.ಎಸ್. ನಾಗರಾಜ್ ಮತ್ತು ದ್ವಿತೀಯ ಉಪ ಗರ್ವನರ್‌ ಸಿ.ಎಂ. ನಾರಾಯಣಸ್ವಾಮಿ ಮಾತನಾಡಿ, ವಿಶ್ವದಾದ್ಯಂತ ಸೇವಾ ಕಾರ್ಯದಲ್ಲಿ ತೊಡಗಿರುವ ಲಯನ್ಸ್ ಕ್ಲಬ್ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸೇವಾ ಸಂಸ್ಥೆಯಾಗಿದೆ. ಹೊಸದಾಗಿ ಲಯನ್ಸ್ ಕ್ಲಬ್‌ಗೆ ಸೇರ್ಪಡೆಯಾಗುತ್ತಿರುವ ಎಲ್ಲರೂ ಸಮಯ, ಹಣ ಹಾಗೂ ಪ್ರತಿಭೆಯನ್ನು ಸಮಾಜದ ಅಭ್ಯುದಯಕ್ಕೆ ಬಳಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಲಯನ್ಸ್ ಕ್ಲಬ್ ಆಫ್ ತೊಂಡೇಬಾವಿ ನೂತನ ಅಧ್ಯಕ್ಷರಾಗಿ ಜೆ. ಕಾಂತರಾಜು ಹಾಗೂ ಕಾರ್ಯಕಾರಿ ತಂಡದ ಸದಸ್ಯರು ಪದಗ್ರಹಣ ಮಾಡಿದರು. ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 8 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್‌ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಎ. ವಿಜಯಕುಮಾರ್, ಜಿಲ್ಲಾ ಖಜಾಂಚಿ ಜಿ.ಎಲ್. ಪ್ರಸನ್ನಕುಮಾರ್, ಜಿಲ್ಲಾ ಕೃಷಿ ಸಹಕಾರ ವಿಭಾಗದ ಸಂಯೋಜಕ ಜೆ. ರಾಜೇಂದ್ರ, ಜಿಎಂಟಿ ಸಂಯೋಜಕ ಡಿ.ಎನ್. ವೆಂಕಟನರಸಿಂಹಲು, ಪ್ರಾಂತೀಯ ಅಧ್ಯಕ್ಷೆ ಗೌರಿ ಕೃಷ್ಣರಾಜು, ವಲಯ ಅಧ್ಯಕ್ಷ ಎಂ.ಆರ್. ಶ್ರೀನಿವಾಸ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.