ಆನೇಕಲ್: ಪಟ್ಟಣದ ದೇವರಕೊಂಡಪ್ಪ ವೃತ್ತದ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಆನೇಕಲ್ ತಾಲ್ಲೂಕು ಸಾಮರಸ್ಯ ವೇದಿಕೆಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
25 ವಿವಿಧ ಸಮುದಾಯಗಳ ಮುಖಂಡರು ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದರು.
ಸವಿತಾ ಸಮಾಜ, ಮಡಿವಾಳ, ವಾಲ್ಮೀಕಿ, ಲಿಂಗಾಯತ, ನರ್ಗತರು, ದೇವಾಂತ, ತಿಗಳ, ಕುರುಬರು, ಬಲಿಜಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅರಸರು, ವಿಶ್ವಕರ್ಮ, ಕುಂಬಾರ, ಲಂಬಾಣಿ, ಒಕ್ಕಲಿಗರು, ಪದ್ಮಶಾಲಿ, ತೊಗಟ, ಶೆಟ್ಟರು, ಮಾರ್ವಾಡಿ, ರೆಡ್ಡಿ, ಗಾಣಿಗರು ಸೇರಿದಂತೆ 25 ವಿವಿಧ ಸಮುದಾಯದ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಗುಣಗಾನ ಮಾಡಿದವು.
ಮಹಾನಾಯ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಪಾತ್ರ ಪ್ರಮುಖವಾದುದ್ದು. ಸರ್ವಧರ್ಮಗಳ ಸಮನ್ವಯತೆ ಮೂಡಿಸುವ ಸಲುವಾಗಿ ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಸಾಮರಸ್ಯ ವೇದಿಕೆಯ ಸುರೇಶ್ ಬಾಬು ತಿಳಿಸಿದರು.
ಮಂಜುನಾತ ಧನಂಜಯ, ಡೋಬಿ ಮುನಿರಾಜು, ರವಿ, ನಾರಾಯಣ್, ಗಣೇಶ್, ಮಹದೇವ್, ಮನೋಹರ್, ಚಂದ್ರಣ್ಣ. ಪ್ರಕಾಶ್, ಮುನಿರಾಜು, ಆನಂದ್, ಮಧುರಾಜ್, ಗೋಪಾಲಕೃಷ್ಣ, ಪ್ರವೀನ್, ಮುರಳಿ, ಯತಿರಾಜ್ ಅಯ್ಯಂಗಾರ್, ಲಕ್ಷ್ಮೀನಾರಾಯಣಚಾರ್ಯ, ಪಂಡರಿ ರಘು, ಹರೀಶ್, ಭಾರ್ಗವ್, ಕೇಶವ, ಮಂಜುನಾಥ್, ತುಳಸಿ, ಜನಾರ್ಧನ್, ಮುನಿರಾಜು, ಜಯದೇವ್, ಗೋಪಿ, ದ್ವಾರಕನಾಥ್, ರಾಮಕೃಷ್ಣ, ಹರಿಸಿಂಗ್, ನರಸಿಂಹರೆಡ್ಡಿ, ಯಂಗಾರೆಡ್ಡಿ, ರವಿರೆಡ್ಡಿ, ಮಂಜುನಾಥ್, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.