ಪ್ರಾತಿನಿಧಿಕ ಚಿತ್ರ
ಆನೇಕಲ್: ಸಹಜೀವನ ನಡೆಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜಿಗಣಿ ಠಾಣೆ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.
ಮೃತರು ಒಡಿಶಾ ಮೂಲದ ಸೀಮಾ ನಾಯಕ್ (25) ಮತ್ತು ರಾಕೇಶ್ ಪಾತ್ರ (23) ಎಂದು ಗುರುತಿಸಲಾಗಿದೆ. ಕಲ್ಲುಬಾಳು ಗ್ರಾಮದ ಮನೆಯೊಂದರಲ್ಲಿ ಸಹಜೀವನ ನಡೆಸುತ್ತಿದ್ದರು. ಎರಡು ದಿನಗಳಿಂದ ಮನೆಯಲ್ಲಿ ಚಲನವಲನ ಕಂಡು ಬಂದಿಲ್ಲ. ಸ್ಥಳೀಯರು ಅನುಮಾನಗೊಂಡು ಕಿಟಕಿ ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ರಾಕೇಶ್ ಪಾತ್ರ ಕುಡಿತದ ಚಟ ಹೊಂದಿದ್ದ. ಹಣಕ್ಕಾಗಿ ಸೀಮಾಳೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ. ಸೋಮವಾರ ಜಗಳವಾಡಿ ಖಿನ್ನತೆಗೊಳಗಾಗಿದ್ದ ರಾಕೇಶ್, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದ ಸೀಮಾ, ಗೆಳೆಯ ಮೃತಪಟ್ಟಿರುವನ್ನು ನೋಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.