ADVERTISEMENT

ಅಂಬೇಡ್ಕರ್ ಪ್ರತಿಮೆ ಮುಂದೆ ನವಜೀವನಕ್ಕೆ ಕಾಲಿಟ್ಟ ಪ್ರೇಮಿಗಳು

ಸಂವಿಧಾನ ಪೀಠಿಕೆ ಓದಿದ ನವ ದಂಪತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:14 IST
Last Updated 14 ಏಪ್ರಿಲ್ 2025, 16:14 IST
ಆನೇಕಲ್ ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಮುಂಭಾಗದಲ್ಲಿ ಪ್ರೇಮಿಗಳಾದ ಕಿರಣ್ ಮತ್ತು ಪ್ರಿಯಾಂಕ ವಿವಾಹವಾದರು
ಆನೇಕಲ್ ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಮುಂಭಾಗದಲ್ಲಿ ಪ್ರೇಮಿಗಳಾದ ಕಿರಣ್ ಮತ್ತು ಪ್ರಿಯಾಂಕ ವಿವಾಹವಾದರು   

ಆನೇಕಲ್ : ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳು ಅಂಬೇಡ್ಕರ್ ಜಯಂತಿಯಂದು ದೇವರಕೊಂಡಪ್ಪ ವೃತ್ತದ ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಸೋಮವಾರ ನವಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಸೂರಿನ ಟಿ.ನರಸೀಪುರದ ಕಿರಣ್‌ ಮತ್ತು ಪ್ರಿಯಾಂಕ ಅಂಬೇಡ್ಕರ್‌ ಜಯಂತಿಯಂದು ಹೊಸಜೀವನ ಆರಂಭಿಸಿದ ಜೋಡಿ.

ಸಂವಿಧಾನದ ಪೀಠಿಕೆ ಓದುವ ಮತ್ತು ಪಂಚಶೀಲ ತತ್ವ ದೀಕ್ಷೆ ಪಡೆಯುವ ಮೂಲಕ ನವಜೋಡಿ ವಿವಾಹವಾದರು. ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್‌, ವಿಶೇಷ ತಹಶೀಲ್ದಾರ್‌ ಕರಿಯ ನಾಯಕ್‌ ವಿವಾಹಕ್ಕೆ ಸಾಕ್ಷಿಯಾದರು.

ADVERTISEMENT

‘ಒಂದೇ ಊರಿನವರಾದ ನಾವು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಆದರೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ಜಯಂತಿಯಂದು ಅಂಬೇಡ್ಕರ್‌ ಅವರ ಪುತ್ಥಳಿಯ ಮುಂಭಾಗದಲ್ಲಿಯೇ ವಿವಾಹವಾಗಿದ್ದೇವೆ’ ಎಂದು ಕಿರಣ್‌ ತಿಳಿಸಿದರು. ರಾವಣ, ಮಂಜು, ವೆಂಕಟೇಶ್ ಮೂರ್ತಿ ವಿಜಯಕುಮಾರಿ ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.