ಆನೇಕಲ್: ಪಟ್ಟಣದ ಶ್ರೀರಾಮ ಕುಟೀರದಲ್ಲಿ ಸಂಪೂರ್ಣ ಮಹಿಳೆ ಕಲಾವಿದರೇ ‘ದಕ್ಷಯಜ್ಞ’ ನಾಟಕ ಪ್ರದರ್ಶಿಸಿದರು.
ಮಾರಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ನಾಟಕಕ್ಕೆ ಮಹಿಳಾ ಪಾತ್ರಧಾರಿಗಳು ಜೀವತುಂಬಿದರು. ಹೊಂಗಸಂದ್ರದ ಪರಮಶಿವಯಯ್ಯ ಅವರ ನಿರ್ದೇಶನದಲ್ಲಿ ನಾಟಕ ಮೂಡಿ ಬಂತು.
ನಾಟಕ ಪ್ರದರ್ಶನವು ರಾತ್ರಿ 2ಗಂಟೆಗಳವರೆಗೂ ನಡೆಯಿತು. ಮಧ್ಯರಾತ್ರಿಯಲ್ಲಿಯೂ ಪೌರಾಣಿಕ ನಾಟಕ ವೀಕ್ಷಿಸಲು ರಾಮಕುಟೀರದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.
ಈಶ್ವರನಾಗಿ ರೇಣುಕಾ, ದದೀಚಿಯಾಗಿ ನಳಿನಾಕ್ಷಿ, ವಿಷ್ಣು ಪಾತ್ರದಲ್ಲಿ ಅನುಸೂಯ, ನಂದಿಯಾಗಿ ರಾಜೇಶ್ವರಿ ಜೀವ ತುಂಬಿದರು. ಭಾರತಿ, ದೀಪು, ಪ್ರಿಯಾಂಕ, ರಂಜಿತ, ಇಂದು, ಶಂಕರಮ್ಮ, ಹರ್ಷಿತಾ, ಶ್ರೀವಿದ್ಯಾ, ನಿತ್ಯಾ ಸಾಥ್ ನೀಡಿದರು.
ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಇಂದಿನ ಅವಶ್ಯಕವಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ನಾಟಕಕ್ಕೆ ಇದೆ. ಪೌರಾಣಿಕ ನಾಟಕಗಳಿಂದ ಉತ್ತಮ ಸಂದೇಶಗಳು ದೊರೆಯುತ್ತವೆ. ಮಹಿಳಾ ಪಾತ್ರಧಾರಿಗಳು ನಾಟಕ ಪ್ರದರ್ಶನ ನೀಡಿರುವುದು ಶ್ಲಾಘನೀಯ ಎಂದು ನಾಟಕ ನಿರ್ದೇಶಶಕ ಪರಮಶಿವಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.