ADVERTISEMENT

ಮಳೆ: ಅಪಾರ್ಟ್‌ಮೆಂಟ್‌ ತಡೆಗೋಡೆ ಕುಸಿದು 12 ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:53 IST
Last Updated 12 ಸೆಪ್ಟೆಂಬರ್ 2025, 2:53 IST
ಮಳೆಯಿಂದ ಅಪಾರ್ಟ್‌ಮೆಂಟ್‌ ಗೊಡೆ ಕುಸಿದಿರುವುದು
ಮಳೆಯಿಂದ ಅಪಾರ್ಟ್‌ಮೆಂಟ್‌ ಗೊಡೆ ಕುಸಿದಿರುವುದು   

ಹೊಸಕೋಟೆ:‌ ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಮುಖ್ಯ ರಸ್ತೆಗೆ ಹೊಂದಿಕೊಂಡ ಕಮ್ಮಾವಾರಿ ಬಡಾವಣೆಯಲ್ಲಿ ಬುಧವಾರ ಸುರಿದ ಮಳೆಯಿಂದ  12 ಮನೆಗಳಿಗೆ ಹಾನಿಯಾಗಿದೆ.

ಬಡಾವಣೆಯಲ್ಲಿ 1ಎಕೆರೆ 23 ಗುಂಟೆಯಲ್ಲಿ 14 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ 25 ಅಡಿ ವರೆಗೆ ಮಣ್ಣು ತೆಗೆಯಲಾಗಿದೆ. ಇದರ ಸಮೀಪದ ಅಪಾರ್ಟ್‌ಮೆಂಟ್‌ ಹೊಂದಿಕೊಂಡಿದ್ದ ತಡೆಗೋಡೆ ಕುಸಿದು 12 ಮನೆಗಳಿಗೆ ಹಾನಿಯಾಗಿದೆ.

ಕಾಮಗಾರಿ ಜಾಗದ ಸುತ್ತ ಜನವಸತಿ ಇದ್ದರೂ ಸುರಕ್ಷತೆ ಮಾನದಂಡ ಅನುಸರಿಸದೆ ಕಾಮಗಾರಿ ನಡೆಸಿದ್ದರಿಂದ ಈ ಅವಘಡ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ನೀಲಲೋಚನಾ ಪ್ರಭು, 12 ಮನೆಗಳಲ್ಲಿರುವ ಜನರನ್ನು ಸ್ಥಳಾಂತರಿಸುವ ಕ್ರಮ ಕೈಗೊಂಡರು. ಮೂರು ಎಂಜಿನಿಯರ್‌ಗಳನ್ನು ನೇಮಿಸಿ ತಡೆಗೋಡೆ ಕುಸಿದಿರುವ ಜಾಗಕ್ಕೆ ಹೊಂದಿಕೊಂಡ ಮನೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಬಿಲ್ಡರ್‌ಗಳಿಗೆ ಸೂಚಿಸಿದರು.

ಮಳೆಯಿಂದ ಅಪಾರ್ಟ್‌ಮೆಂಟ್‌ ಗೊಡೆ ಕುಸಿದಿರುವುದು

ಯಾರು ಹೊಣೆ

ಕಳೆದ 15 ವರ್ಷಗಳ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ದುಡಿದು ಒಂದೊಂದು ರೂಪಾಯಿಯಲ್ಲಿ ನಿವೇಶನ ಕೊಂಡು ಸಾಲ ಮಾಡಿ ಮನೆ ಕಟ್ಟಿಸಿರುವೆ. ಈಗ ಯಾರೋ ಪಕ್ಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸುವ ಭರದಲ್ಲಿ ನಮ್ಮ ಮನೆ ಕುಸಿಯುವ ಹಾಗೇ ಮಾಡಿದ್ದಾರೆ. ಇದಕ್ಕೆ ಹೊರು ಹೊಣೆ ನ್ಯಾಯ ಕೊಡೋರು ಯಾರು ಮಂಜುಳಾ ಹಾನಿಗೊಳಗದ ಮನೆಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.