ADVERTISEMENT

ವಿಜಯಪುರ: ಪುರಸಭೆಯಿಂದ ಕಸದ ‘ಬ್ಲಾಕ್‌ಸ್ಪಾಟ್‍ ನಿರ್ಮೂಲನೆ 

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 2:26 IST
Last Updated 29 ಸೆಪ್ಟೆಂಬರ್ 2025, 2:26 IST
ವಿಜಯಪುರ ಪಟ್ಟಣದ ಅಶೋಕನಗರ ಬಳಿ ಇರುವ ಕಸದ ಬ್ಲಾಕ್ ಸ್ಪಾಟ್ ಅನ್ನು ಪುರಸಭೆಯಿಂದ ಸ್ವಚ್ಛಗೊಳಿಸಲಾಯಿತು
ವಿಜಯಪುರ ಪಟ್ಟಣದ ಅಶೋಕನಗರ ಬಳಿ ಇರುವ ಕಸದ ಬ್ಲಾಕ್ ಸ್ಪಾಟ್ ಅನ್ನು ಪುರಸಭೆಯಿಂದ ಸ್ವಚ್ಛಗೊಳಿಸಲಾಯಿತು   

ವಿಜಯಪುರ (ದೇವನಹಳ್ಳಿ): ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮ ಅಡಿಯಲ್ಲಿ ಪಟ್ಟಣದ ಅಶೋಕನಗರ ಮತ್ತು ಬಸವೇಶ್ವರ ಬಡಾವಣೆಯ ಕಸ ಸುರಿಯುವ ಸ್ಥಳವನ್ನು (ಬ್ಲಾಕ್ ಸ್ಪಾಟ್) ಗುರುತಿಸಿ ಪುರಸಭೆಯಿಂದ ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ಶುದ್ಧ ಮಾಡಿ ರಂಗೋಲಿ ಬಿಡಿಸಿ, ಅಲಂಕರಿಸಿ ಸಾರ್ವಜನಿಕರಿಗೆ ಕಸ ಸುರಿಯದಂತೆ ಅರಿವು ಮೂಡಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ಮಾತನಾಡಿ, ‘ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಸಾರ್ವಜನಿಕರು ಗೃಹ ಆಧಾರಿತ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಮೂಲದಲ್ಲೇ ವಿಂಗಡಿಸಿ ಕಸ ಸಂಗ್ರಹಣೆ ವಾಹನಗಳಿಗೆ ನೀಡಬೇಕು ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುರಿಯಬಾರದು. ತ್ಯಾಜ್ಯ ಪುನರ್ಬಳಕೆ, ಮರುಬಳಕೆ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಪಟ್ಟಣವನ್ನು ಕಸಮುಕ್ತ ಗೊಳಿಸುವುದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಪುರಸಭೆ ಆರೋಗ್ಯಾಧಿಕಾರಿ ಲಾವಣ್ಯ, ಪುರಸಭೆ ವ್ಯಾಪ್ತಿಯಲ್ಲಿ 41 ಸ್ಥಳಗಳನ್ನು ಬ್ಲಾಕ್‌ಸ್ಪಾಟ್‍ಗಳನ್ನು ಗುರುತಿಸಿ, ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಇಂದು ಎರಡು ಕಡೆ ಬ್ಲಾಕ್‌ಸ್ಪಾಟ್‍ಗಳನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ಕಸ ಸುರಿಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ ಎಂದರು. ಪುರಸಭೆ ಪರಿಸರ ಅಭಿಯಂತರ ಶೇಖರ್ ರೆಡ್ಡಿ, ಪೌರಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.