ADVERTISEMENT

ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ: ಬಂಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 16:19 IST
Last Updated 30 ಜುಲೈ 2024, 16:19 IST
ಹೊಸಕೋಟೆ ತಾಲ್ಲೂಕಿನ ನಂದಗುಡಿ ಬೇಕರಿ ಸಿಬ್ಬಂದಿಯನ್ನು ಥಳಿಸಿ, ಷೋಕೆಸ್ ಹೊಡೆದು ಹಾಕಿರುವ ಸ್ಥಳವನ್ನು ಪರಿಶೀಲಿಸುತ್ತಿರುವ ಪೊಲೀಸರು.
ಹೊಸಕೋಟೆ ತಾಲ್ಲೂಕಿನ ನಂದಗುಡಿ ಬೇಕರಿ ಸಿಬ್ಬಂದಿಯನ್ನು ಥಳಿಸಿ, ಷೋಕೆಸ್ ಹೊಡೆದು ಹಾಕಿರುವ ಸ್ಥಳವನ್ನು ಪರಿಶೀಲಿಸುತ್ತಿರುವ ಪೊಲೀಸರು.   

ಹೊಸಕೋಟೆ: ಬೇಕರಿಯಲ್ಲಿ ಕ್ರೀಮ್ ಬನ್ ತಿಂದು ಬಿಲ್ ಕೇಳಿದ ಬೇಕರಿ ಸಿಬ್ಬಂದಿಯನ್ನು ಥಳಿಸಿ, ಕಬ್ಬಿಣದ ಪೈಪ್‌ಗಳಿಂದ ಬೇಕರಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ನಂದಗುಡಿಯಲ್ಲಿ ಸೋಮವಾರ ನಡೆದಿದೆ.

ಕೇರಳ ಮೂಲದ ವ್ಯಕ್ತಿಗೆ ಸೇರಿದ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಬೇಕರಿ ಮಾಲೀಕರು ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಅದೇ ಗ್ರಾಮದ ರೋಹನ್ (26), ಭರತ್ (22), ರಾಕೇಶ್ (20) ಹಾಗೂ ಗೌತಮ್(19) ಎಂಬುವವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT