ADVERTISEMENT

25 ವರ್ಷಗಳ ದಾಖಲೆ ಮೀರಿಸಿದ ಚಳಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:18 IST
Last Updated 7 ಜನವರಿ 2019, 13:18 IST
ದೇವನಹಳ್ಳಿಯಲ್ಲಿ ಬೆಳಿಗ್ಗೆ ಕಂಡ ಹಿಮ
ದೇವನಹಳ್ಳಿಯಲ್ಲಿ ಬೆಳಿಗ್ಗೆ ಕಂಡ ಹಿಮ   

ದೇವನಹಳ್ಳಿ: ಜ.2ರಿಂದ ಇದುವರೆಗೂ ಕನಿಷ್ಠ ಮಟ್ಟಕ್ಕೆ ಇಳಿದಿರುವ ಉಷ್ಣಾಂಶದಿಂದಾಗಿ ಜನರು ಚಳಿಯಿಂದ ತತ್ತರಿಸುವಂತಾಗಿದೆ.

ಕಳೆದ 25ವರ್ಷಗಳ ಹಿಂದಿನ ದಾಖಲೆ ಮೀರಿರುವ ಚಳಿಯಿಂದ ಪ್ರತಿದಿನ ಉಷ್ಣಾಂಶ 9ರಿಂದ 12ರ ಆಸುಪಾಸು ಇದೆ. ಬೆಳಿಗ್ಗೆ 10ರವರೆಗೆ ಚಳಿ ತೀವ್ರತೆ ಇರಲಿದೆ. ಸಂಜೆ 4ರ ಸುಮಾರಿಗೆ ಮತ್ತೆ ಚಳಿ ಆಟ ಆರಂಭಗೊಂಡು ಮೈ ನಡುಗುವಂತೆ ಆಗಿದೆ.

ಚಳಿ ತೀವ್ರತೆ ಹಿನ್ನೆಲೆಯಲ್ಲಿ ಸ್ವೆಟರ್, ಉಲ್ಲನ್ ಹೊದಿಕೆ, ಜರ್ಸಿ, ಜಾಕೇಟ್ ವಹಿವಾಟು ಜೋರಾಗಿದೆ. ಚಳಿಗೆ ಬೆಂಕಿ ಕಾಯಿಸಿಕೊಳ್ಳುವವರು ಒಂದೆಡೆಯಾದರೆ, ಕಾಫಿ, ಟೀ ಸೇವನೆ ಕಡಿಮೆಯಾಗಿಲ್ಲ. ತಂಪು ಹವಾಮಾನಕ್ಕೆ ಒಗ್ಗಿಕೊಳ್ಳಲು ಉಷ್ಣಾಂಶದ ಪದಾರ್ಥಗಳ ಖರೀದಿಗೆ ಗ್ರಾಹಕರು ಹೆಚ್ಚು ಒತ್ತು ನೀಡುತ್ತಿದ್ದಾರೆ.

ADVERTISEMENT

ಇದೊಂದು ಭಯಾನಕ ಚಳಿ ಎಂದು ಬಸ್ ಚಾಲಕ ರಮೇಶ್ ಬಣ್ಣಿಸಿದ್ದಾರೆ. ಅತಿಯಾದ ಚಳಿ ತೀವ್ರತೆಯಿಂದ ಶೀತ, ನೆಗಡಿ, ಜ್ವರ, ಕಫ, ರಕ್ತದೊತ್ತಡ, ಹೃದಯ ಸಂಬಂಧಿ ರೋಗಿಗಳು ಹೆಚ್ಚಾಗಲಿವೆ ಎನ್ನುತ್ತಾರೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.