ADVERTISEMENT

‘ಕೆಳವರ್ಗದ ಶರಣರ ಕೊಡುಗೆ ನಿರ್ಲಕ್ಷಿಸುವಂತಿಲ್ಲ’

ದೇವನಹಳ್ಳಿಯಲ್ಲಿ ‘ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 12:58 IST
Last Updated 22 ಜನವರಿ 2019, 12:58 IST
ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಗಣ್ಯರು ಭಾಗವಹಿಸಿದ್ದರು
ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಗಣ್ಯರು ಭಾಗವಹಿಸಿದ್ದರು   

ದೇವನಹಳ್ಳಿ: ‘12ನೇ ಶತಮಾನದಲ್ಲಿದ್ದ ಕೆಳವರ್ಗದ ಶರಣರ ಕೊಡುಗೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ’ ಎಂದು ಉಪನ್ಯಾಸಕ ಚಂದ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಅಚಲರಾಮಾವಧೂತ ಮಠದಲ್ಲಿ ತಾಲ್ಲೂಕು ಗಂಗಾಮತಸ್ಥರ (ಬೆಸ್ತ) ಸಂಘ ಮತ್ತು ಅಂಬಿಗರ ಚೌಡಯ್ಯ ಯುವಕರ ಸಂಘದ ಸಹಯೋಗದಲ್ಲಿ ನಡೆದ ‘ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ನಿಜಶರಣ ಅಂಬಿಗರ ಚೌಡಯ್ಯರ ಕೇವಲ 322 ವಚನಗಳಿವೆ. ಒಂದೊಂದು ವಚನಗಳು ನೇರ, ನಿಷ್ಠುರ ತಿಕ್ಷಣವಾದ ವಚನಗಳು. ಅವರಿಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ. ಹಸಿದವನಿಗೆ ಅನ್ನ, ನೀರು, ಆಶ್ರಯ ನೀಡಿದವರೇ ದೇವರು ಎಂಬ ಪರಿಕಲ್ಪನೆ ಹೊಂದಿದ್ದರು ಎಂದರು.

ADVERTISEMENT

ಬಡವರ ಸೇವೆಯಿಂದ ಸಾಕ್ಷಾತ್ಕಾರ ಪಡೆಯಬಹುದು ಎನ್ನುವುದನ್ನು ಅವರ ವಚನದಲ್ಲಿ ಕಾಣಬಹುದು. ಕಟ್ಟಿದ ಲಿಂಗವನ್ನು ಬಿಟ್ಟು ಬೆಟ್ಟದಲ್ಲಿನ ಲಿಂಗಕ್ಕೆ ಪೂಜೆ ಗೈದರೆ ಫಲವಿಲ್ಲ. ಅಂಗೈಯಲ್ಲಿ ಲಿಂಗವನ್ನಿಟ್ಟು ಧ್ಯಾನಿಸಿದರೆ ಲಾಭವಿಲ್ಲ. ತನ್ನ ತನು ಮನದಿಂದ ಅನ್ನ ನೀಡು ಅದರಲ್ಲಿ ಕೈಲಾಸ ಕಾಣು ಎಂಬುದು ಒಟ್ಟಾರೆ ನಿಜಶರಣನ ಅಭಿಪ್ರಾಯವಾಗಿತ್ತು ಎಂದು ತಿಳಿಸಿದರು.

ಕರ್ನಾಟಕ ಗಂಗಾಮತಸ್ಥರ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ಕೆ.ಎಚ್. ಗೋಪಾಲಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ರಾಮಾಂಜಿಪ್ಪ, ಉಪಾಧ್ಯಕ್ಷ ನಾಗೇಶ್, ಕಾರ್ಯಾಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಎಂ.ಶ್ರೀನಿವಾಸ್, ಹೊಸಕೋಟೆ ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಅನ್ನಪೂರ್ಣಮ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೊಪಾಲಕೃಷ್ಣ, ಅಂಬಿಗರ ಚೌಡಯ್ಯ ತಾಲ್ಲೂಕು ಯುವಕರ ಸಂಘ ಅಧ್ಯಕ್ಷ ಡಿ.ಎ. ಸತೀಶ್, ಉಪಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಘಟಕ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಶೋಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.