ADVERTISEMENT

ಕುಂದು ಕೊರತೆ: ರಸ್ತೆ ಅವ್ಯವಸ್ಥೆ: ಸಂಚಾರಕ್ಕೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 5:15 IST
Last Updated 7 ಅಕ್ಟೋಬರ್ 2021, 5:15 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆಯಿಂದ ಮಲ್ಲಾತಹಳ್ಳಿಗೆ ಹೋಗುವ ರಸ್ತೆ ಕೆಸರುಮಯವಾಗಿದೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆಯಿಂದ ಮಲ್ಲಾತಹಳ್ಳಿಗೆ ಹೋಗುವ ರಸ್ತೆ ಕೆಸರುಮಯವಾಗಿದೆ   

ದೊಡ್ಡಬಳ್ಳಾಪುರ:ಕಸಬಾ ಹೋಬಳಿಯ ಮಲ್ಲಾತಹಳ್ಳಿಗೆ ಹೋಗುವ ರಸ್ತೆ ಹದಗೆಟ್ಟು ದಶಕಗಳೇ ಕಳೆದಿದೆ.

ಗ್ರಾಮ ಪಂಚಾಯಿತಿ ಮೊದಲುಗೊಂಡು ಜಿಲ್ಲಾಧಿಕಾರಿವರೆಗೂ ಹಲವಾರು ಬಾರಿ ಮನವಿ ಸಲ್ಲಿಸಿ ರಸ್ತೆ ದುರಸ್ತಿ ಮಾಡಿಕೊಡುವಂತೆ ಕೇಳಿಕೊಳ್ಳಲಾಗಿದೆ. ಆದರೆ, ಗ್ರಾಮಸ್ಥರ ಮನವಿಗೆ ಮಾತ್ರ ಸ್ಪಂದನೆ ಸಿಕ್ಕಿಲ್ಲ.

ದೊಡ್ಡಬಳ್ಳಾಪುರ- ಗೌರಿಬಿದನೂರು ಹೆದ್ದಾರಿ ಕಂಟನಕುಂಟೆ ಬಳಿಯಿಂದ ಮಲ್ಲಾತಹಳ್ಳಿಗೆ ಸುಮಾರು ಒಂದೂವರೆ ಕಿ.ಮೀ. ದೂರವಾಗುತ್ತದೆ. ಕಾಲ್ನಡಿಗೆಯಲ್ಲಿಯೇ ಗ್ರಾಮಕ್ಕೆ ಹೋಗಬೇಕು. 10 ವರ್ಷಗಳ ಹಿಂದೆ ಹಾಕಲಾಗಿದ್ದ ಜೆಲ್ಲಿ ಕಲ್ಲುಗಳು ಕಿತ್ತುಹೋಗಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಹಗಲಿನ ವೇಳೆಯಲ್ಲಿಯೇ ನಡೆದುಕೊಂಡು ಹೋಗಲು ಸಂಕಷ್ಟಪಡಬೇಕಿದೆ.

ADVERTISEMENT

ಇನ್ನು ರಾತ್ರಿ ವೇಳೆಯಲ್ಲಿ ನಡೆದುಕೊಂಡು ಹೋಗುವವರು ಕೆಸರಿನಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ದ್ವಿಚಕ್ರವಾಹನಗಳು ಇರಲಿ ಕನಿಷ್ಠ ನಡೆದುಕೊಂಡು ಹೋಗುವಂತಹ ರಸ್ತೆಯನ್ನಾದರೂ ನಿರ್ಮಿಸಿಕೊಡಲು ಮನವಿ.
-ಚಂದ್ರಶೇಖರ್‌,ಮಲ್ಲಾತಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.