
ವಿಜಯಪುರ (ದೇವನಹಳ್ಳಿ): ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ವಾಯು ಮಾಲಿನ್ಯದಿಂದ ಉಂಟಾಗುವ ಪರಿಸರ ಹಾನಿ ಕುರಿತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದೇವನಹಳ್ಳಿ ಸಾರಿಗೆ ಇಲಾಖೆ ಆರ್‌ಟಿಓ ಬಿ.ಜಿ.ಸುಧೀಂದ್ರ ಮಾತನಾಡಿ, ಸಾರ್ವಜನಿಕರು ಪ್ರಯಾಣಕ್ಕೆ ಸ್ವಂತ ವಾಹನ ಬಳಸುವ ಬದಲು ಸಾರ್ವಜನಿಕ ವಾಹನಗಳ ಬಳಕೆ ಮಾಡಿದರೆ ವಾಯುಮಾಲಿನ್ಯ ತಡೆಯಬೇಕು ಎಂದು ಹೇಳಿದರು.
`ತಲೆಗೊಂದು ಗಿಡ' ಎಂಬಂತೆ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂದು ಅರಿತು ಗಿಡಗಳನ್ನು ನೆಟ್ಟು ಪೋಷಿಸಬೇಕು. ಮನೆ, ಶಾಲೆಯ ಆವರಣ ಸುತ್ತಮುತ್ತ ಗಿಡಗಳನ್ನು ನೆಡಬೇಕು ಎಂದರು.
ವಾಹನ ಮಾಲೀಕರು, ಚಾಲಕರು ನಿರ್ವಾಹಕರು ತಮ್ಮ ಮೊಬೈಲ್‌ನಲ್ಲಿ ಎಂಪರಿವಾಹನ್ ಆ್ಯಪ್ ಬಳಸಿ ತಮ್ಮ ವಾಹನ ಎಫ್‌ಸಿ, ವಿಮೆ, ವಾಯುಮಾಲಿನ್ಯ ತಪಾಸಣೆ, ವಾಹನದ ಮೇಲೆ ಎಷ್ಟು ಪ್ರಕರಣ ದಾಖಲಾಗಿವೆ ಎಂಬ ಇತ್ಯಾದಿ ಎಲ್ಲಾ ವಿವರಗಳನ್ನು ತಾವೇ ಪರಿಶೀಲಸಿ ದಾಖಲೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕೆಂದು ಎಂದು ತಿಳಿಸಿದರು.
‘18 ವರ್ಷಕ್ಕಿಂತ ಒಳಗಿನವರಿಗೆ ವಾಹನ ನೀಡುವ ಪೋಷಕರು ಸಹ ನ್ಯಾಯಾಲಯದ ಆದೇಶದಂತೆ ₹2,5000 ದಂಡ ವಿಧಿಸಲಾಗುತ್ತದೆ. ಚಿಕ್ಕ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು ಎಂದು ದೇವನಹಳ್ಳಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖ ಇನ್‌ಸ್ಪೆಕ್ಟರ್ ಶ್ವೇತಾ ತಿಳಿಸಿದರು.
ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕರು, ಭವಿಷ್ಯ ನಿರ್ಮಿಸುವ ಮಕ್ಕಳು ತಮ್ಮ ವಾಹನದಲ್ಲಿ ಇರುವರೆಂಬ ಅರಿವು ಇಟ್ಟುಕೊಂಡು, ಮಧ್ಯಪಾನ ಮಾಡದೆ ವಾಹನ ಚಲಾಯಿಸಬೇಕು. ಈ ಬಗ್ಗೆ ಅನುಮಾನ ಮೂಡಿದರೆ ಮಕ್ಕಳು ತಮ್ಮ ಪೋಷಕರಿಗೆ ಅಥವಾ ಶಾಲಾ ಆಡಳಿತಕ್ಕೆ ದೂರು ಸಲ್ಲಿಸಬೇಕು ಎಂದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮೋಕ್ಷಿತ್, ಲಿಖಿತ್, ಮಹಮದ್ ತಾಜೀರ್ ಅವರಿಗೆ ಬಹುಮಾನ ವಿತರಿಸಲಾಯಿತು.
ಪ್ರಗತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿ.ಬಸವರಾಜು, ಪ್ರಕಾಶ್, ಸಮಾಜ ಸೇವಕ ಮಂಜುನಾಥ್, ಸಾರಿಗೆ ಇಲಾಖೆ ಅಧಿಕಾರಿ ದಂಡಪಾಣಿ, ಶಾಲಾ ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.