ADVERTISEMENT

ದೇವನಹಳ್ಳಿ | ಅನುಭವ ಮಂಟಪ ಇಂದಿಗೂ ಮಾದರಿ: ತಹಶೀಲ್ದಾರ್‌ ಎಚ್‌.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:21 IST
Last Updated 30 ಏಪ್ರಿಲ್ 2025, 16:21 IST
ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಬಸವಣ್ಣ ಜಯಂತಿ ನಡೆಯಿತು
ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಬಸವಣ್ಣ ಜಯಂತಿ ನಡೆಯಿತು   

ದೇವನಹಳ್ಳಿ: ಬಸವಣ್ಣ ಅವರ ತತ್ವಾದರ್ಶವನ್ನು ಪ್ರತಿಯೊಬ್ಬರು ಪಾಲನೆ ಮಾಡಿದಾಗ ಮಾತ್ರ ಬದುಕಿಗೆ ಅರ್ಥ ಸಿಗಲಿದೆ ತಹಶೀಲ್ದಾರ್‌ ಎಚ್‌.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ವೀರಶೈವ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ಬಸವಣ್ಣ ಜಯಂತಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ವಚನಗಳ ಮೂಲಕ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ್ದರು ಎಂದು ಸ್ಮರಿಸಿದರು.

ADVERTISEMENT

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನಿರ್ದೇಶಕಿ ಅಶ್ವಿನಿ ಮಲ್ಲಿಕಾರ್ಜುನ, ಬಸವಣ್ಣ ಅವರ ಅನುಭವ ಮಂಟಪವೆಂಬ ಅದ್ಭುತ ಪರಿಕಲ್ಪನೆ ಇಂದಿಗೂ ಮಾದರಿ. ಎಲ್ಲ ವರ್ಗದವರನ್ನೂ ಒಂದೆಡೆ ತರುವ ಪ್ರಯತ್ನದ ಭಾಗವಾಗಿ ಅನುಭವ ಮಂಟಪವನ್ನು ಬಸವಣ್ಣ ಪ್ರಾರಂಭಿಸಿದ್ದರು. ಈ ಮೂಲಕ ಸಮಾಜದಲ್ಲಿ ಬೇರೂರಿದ್ದ ಅಂದಶ್ರದ್ಧತೆ, ತಾರತಮ್ಯವನ್ನು ದೂರ ಮಾಡಿದ್ದರು, ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ಧಿಯಾದವರು ಎಂದರು.

ಬಸವಣ್ಣ ವಚನ ಚಳುವಳಿ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಮೂಲಕ ‌ಸಮಾಜಕ್ಕೆ ಬಿಸಿ ಮುಟ್ಟಿಸಿದರು. ಬಸವಣ್ಣ ಮಹಾಮಾನವತವಾದಿ ತತ್ವಜ್ಞಾನಿ, ಸಾಂಸ್ಕೃತಿಕ ಹರಿಕಾರ, ಕಾಯಕಯೋಗಿ ಸಮಾಜದಲ್ಲಿ ಯಾವುದೇ ಜಾತಿ ಬೇದವಿಲ್ಲದೆ ಸಮಾಜದ ಒಳಿತಿಗಾಗಿ ಅವರ ಜೀವನವನ್ನು ಮುಡಿಪಾಗಿಟ್ಟವರು ಎಂದು ಸ್ಮರಿಸಿದರು.

ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಶಾಸ್ತ್ರಿ, 12ನೇ ಶತಮಾನದಲ್ಲಿ ಬಸವಣ್ಣನವರು ಬಡವ ಬಲ್ಲಿಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನತೆಯಿಂದ ಕಂಡು ಅವರ ವಚನಗಳ ಮೂಕ ಸಾಮಾಜಿಕ ಅರಿವು ಮೂಡಿಸಿದರು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿರೂಪಾಕ್ಷಯ್ಯ, ತಾಲ್ಲೂಕು ಉಪಾಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ನಿದೇಶಕರಾದ ಮಲ್ಲಾರಿಕುಮಾರ್, ಜಿಲ್ಲಾ ನಿದೇಶಕಿ ಪುಷ್ಪಾವತಮ್ಮ, ಶಾಂತಮೂರ್ತಿ, ದ್ರಾಕ್ಷಾಯಿಣಿ, ವಿಜಯ್‌ಕುಮಾರ್, ಮಹಿಳಾ ಘಟಕದ ಉಪಾಧಕ್ಷೆ ನಳಿನಾಮಂಜುನಾಥ್, ನಿರ್ದೇಶಕರಾದ ಉಷಾಪೂರ್ಣಚಂದ್ರ, ಸುಲೋಚನ, ಗಿರಿಜಾಂಬ ಮುಖಂಡರಾದ ಕಾಂತರಾಜು, ಸುನಿಲ್, ಸದಾಶಿವಯ್ಯ, ತಾಲೂಕಿನ ವೀರಶೈವ ಸಮಾಜದ ಎಲ್ಲಾ ಮುಖಂಡರು ಸಮುದಾಯಬಂದುಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.