ADVERTISEMENT

ದೇವನಹಳ್ಳಿ: ಪವನ ಸುತ ಹುನುಮ ನಾಮಸ್ಮರಣೆ

ಭಕ್ತರ ಕಣ್ಮನ ಸೆಳೆದ ವಜ್ರಾಂಗಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 8:30 IST
Last Updated 3 ಡಿಸೆಂಬರ್ 2025, 8:30 IST
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿಗೆ ಹೂವಿನ ಅಲಂಕಾರ ಮತ್ತು ಉದ್ದಿನ ವಡೆ ಹಾರ ಹಾಕಿರುವುದು
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿಗೆ ಹೂವಿನ ಅಲಂಕಾರ ಮತ್ತು ಉದ್ದಿನ ವಡೆ ಹಾರ ಹಾಕಿರುವುದು   

ದೇವನಹಳ್ಳಿ: ಹನುಮ ಜಯಂತಿ ಪ್ರಯುಕ್ತ ತಾಲ್ಲೂಕಿನಾದ್ಯಂತ ಆಂಜನೇಯಸ್ವಾಮಿ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.

ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ, ಅನ್ನದಾನ ನಡೆಯಿತು. ದಿನಪೂರ್ತಿ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಪಟ್ಟಣದ ಚಿಕ್ಕಕೆರೆ ಆಂಜನೇಯಸ್ವಾಮಿ ದೇಗುಲದಲ್ಲಿ ದೇವರಿಗೆ ವಿಶೇಷ ಅಭಿಷೇಕ ಮಾಡಿ, ವಜ್ರಾಂಗಿ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಕೊಯಿರಾದ ಆಂಜನೇಯಸ್ವಾಮಿಗೆ ಫಲಪಂಚಾಮೃತ ಅಭಿಷೇಕ ಮಾಡಿ, ವಿವಿಧ ಹೂವುಗಳ ಸಮೇತವಾಗಿ ವಸ್ತ್ರಾಲಂಕಾರ ಮಾಡಿಲಾಗಿತ್ತು.

ADVERTISEMENT

ಪಟ್ಟಣದ ಪಾರಿವಾಟ ಗುಟ್ಟ, ತಾಲ್ಲೂಕು ಕಚೇರಿ , ಆವತಿ ತಿಮ್ಮರಾಯಸ್ವಾಮಿ, ಬಂಡೆಕೆರೆ, ಮಾರ್ಕೆಟ್‌ ಆಂಜನೇಯ, ಕೋಟೆ ರಾಘವೇಂದ್ರ ಸ್ವಾಮಿ ಮಠದಲ್ಲಿನ ವೀರಾಂಜನೇಯ, ಸರೋವರ ಬೀದಿ ಆಂಜನೇಯಸ್ವಾಮಿ, ಲಕ್ಷ್ಮಿಪುರ, ವಿಶ್ವನಾಥಪುರ, ಬನ್ನಿಮಂಗಲ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ನಗರದ ಚೌಕ ಆಂಜನೇಯ ಸ್ವಾಮಿಗೆ ಮಾಡಿರುವ ಅಲಂಕಾರವನ್ನು ಭಕ್ತಾಧಿಗಳು ಕಣ್ತುಂಬಿಕೊಂಡರು.

ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಜಯಂತಿ ಮಹೋತ್ಸವದ ಅಂಗವಾಗಿ ದೇವತಾ ಪ್ರಾರ್ಥನೆ ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಪವಮಾನ ಹೋಮ, ಶ್ರೀರಾಮತಾರಕ ಹೋಮ, ಆಂಜಿನೇಯ ಸ್ವಾಮಿಯವರಿಗೆ ಪಂಚಾಮೃತ ಹಾಗೂ ವಿಶೇಷ ಅಲಂಕಾರ ಹೀಗೆ ಹಲವಾರು ಪೂಜಾಕಾರ್ಯ ನಡೆಯಿತು.

ಎಲ್ಲಾ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿನಿಯೋಗ ನಡೆಯಿತು. ಭಕ್ತರು ಹನುಮ ಶ್ರೀರಾಮ ನಾಮ ಸ್ಮರಣೆಯಲ್ಲಿ ಮಿಂದೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.