ADVERTISEMENT

ರಾಮ ದೂತನ ಸ್ಮರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:47 IST
Last Updated 6 ಡಿಸೆಂಬರ್ 2022, 5:47 IST
ವಿಜಯಪುರ ಪಟ್ಟಣದ ಗಾಂಧಿ ಚೌಕದ ಬಳಿಯಿರುವ ಉತ್ತರಮುಖಿ ಗಣಪತಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು
ವಿಜಯಪುರ ಪಟ್ಟಣದ ಗಾಂಧಿ ಚೌಕದ ಬಳಿಯಿರುವ ಉತ್ತರಮುಖಿ ಗಣಪತಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು   

ವಿಜಯಪುರ (ಬೆಂ.ಗ್ರಾಮಾಂತರ):ಹನುಮ ಜಯಂತಿ ಅಂಗವಾಗಿ ಹೋಬಳಿಯಾದ್ಯಂತ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗಿನಿಂದಲೇ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ಆನೇಕಲ್ ಛತ್ರದ ಉತ್ತರಮುಖಿ ಆಂಜನೇಯಸ್ವಾಮಿ ದೇವಾಲಯ, ಗಾಂಧಿಚೌಕದ ಶ್ರೀರಾಮದೇವರ ದೇವಾಲಯ, ದೇವನಹಳ್ಳಿ ಮುಖ್ಯರಸ್ತೆಯ ವಿಜಯ ವೀರಾಂಜನೇಯಸ್ವಾಮಿ ದೇವಾಲಯ, ಶಿಡ್ಲಘಟ್ಟ ಕ್ರಾಸ್, ಚನ್ನರಾಯಪಟ್ಟಣ ಸರ್ಕಲ್, ಬಸಪ್ಪನ ತೋಪಿನ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯ, ಹಾರೋಹಳ್ಳಿ ಅಭಯ ಆಂಜನೇಯಸ್ವಾಮಿ ದೇವಾಲಯ, ಗುರಪ್ಪನಮಠದ ಮೂಡಲ ಆಂಜನೇಯಸ್ವಾಮಿ, ಕೊಮ್ಮಸಂದ್ರ ಅಭಯ ಆಂಜನೇಯ ದೇವಾಲಯ, ಬೆಟ್ಟಕೋಟೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ
ಮಾಡಲಾಗಿತ್ತು.

ಪಂಚಾಮೃತ ಅಭಿಷೇಕ, ಮಹಾಗಣಪತಿ ಪೂಜೆ, ಅಭಿಷೇಕ, ವಿಶೇಷ ಅಲಂಕಾರ, ಗಣಹೋಮ, ರಾಮತಾರಕ ಹೋಮ, ಪ್ರಧಾನ ಹೋಮ ಸೇರಿದಂತೆ ವಿವಿಧ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಿದರು. ತೋಮಾಲೆ ಮತ್ತು ವಡೆಮಾಲೆ ಸೇವೆ ನಡೆಯಿತು.

ADVERTISEMENT

ಭಕ್ತರು ಭಜನೆಗಳನ್ನು ಮಾಡಿದರು. ಅನೇಕ ದೇವಾಲಯಗಳಲ್ಲಿ ಭಕ್ತಿಗೀತೆಗಳ ಗಾಯನ ಏರ್ಪಡಿಸಲಾಗಿತ್ತು. ತೀರ್ಥ ಪ್ರಸಾದದ ವ್ಯವಸ್ಥೆ ಮಾಡ
ಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.