ADVERTISEMENT

ಅಂಕತಟ್ಟಿ ಡೇರಿಗೆ ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:38 IST
Last Updated 13 ಫೆಬ್ರುವರಿ 2019, 14:38 IST
ವಿಜಯಪುರ ಸಮೀಪದ ಅಂಕತಟ್ಟಿ ಡೇರಿಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು
ವಿಜಯಪುರ ಸಮೀಪದ ಅಂಕತಟ್ಟಿ ಡೇರಿಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು   

ವಿಜಯಪುರ: ಅಂಕತಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ 5 ವರ್ಷದ ಅವಧಿಗೆ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5 ಮಂದಿ ಅವಿರೋಧವಾಗಿ ಆಯ್ಕೆಯಾದರು. ಇತರ 7 ಮಂದಿ ಚುನಾಯಿತರಾಗಿದ್ದಾರೆ ಎಂದು ನಿರ್ವಚನಾಧಿಕಾರಿ ಎನ್.ಶಿವಕುಮಾರ್ ತಿಳಿಸಿದರು.

ಸಮೀಪದ ಅಂಕತಟ್ಟಿ ಡೇರಿಯ 12 ನಿರ್ದೇಶಕರ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ.ವಿ, ಮುನಿನಂಜರೆಡ್ಡಿ, ಮುರಳಿ.ವಿ, ವೆಂಕಟೇಶ.ಸಿ, ವೆಂಕಟೇಶಯ್ಯ.ಎಂ, ಶ್ರೀನಿವಾಸ.ಪಿ, ಶ್ರೀನಿವಾಸ.ವಿ ಚುನಾಯಿತರಾಗಿದ್ದಾರೆ. ಸತೀಶ, ನಾರಾಯಣಮ್ಮ, ರಾಧಮ್ಮ, ವೀರಭದ್ರ, ನಾಗರಾಜ.ಎಸ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.

ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ತೀವ್ರ ಬರಗಾಲಕ್ಕೆ ಸಿಲುಕಿದ ನಮಗೆ ಇರುವ ಏಕೈಕ ಆಸರೆಯೆಂದರೆ ಹೈನುಗಾರಿಕೆ. ಇದರಿಂದಲೇ ನಾವೆಲ್ಲರೂ ಜೀವನ ರೂಪಿಸಿಕೊಂಡು ಬರುತ್ತಿದ್ದೇವೆ. ಗ್ರಾಮದಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಿ, ಸಂಘದ ಚಟುವಟಿಕೆಗಳಿಗೆ ಉಪಯೋಗವಾಗುವಂತೆ ನೋಡಿಕೊಂಡಿದ್ದೇವೆ. ಒಕ್ಕೂಟದಿಂದ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಉತ್ಪಾದಕರಿಗೆ ಒದಗಿಸುತ್ತಿದ್ದೇವೆ’ ಎಂದರು.

ADVERTISEMENT

‘ನಮ್ಮಲ್ಲಿ ಒಟ್ಟು 163 ಮಂದಿ ಷೇರುದಾರರಿದ್ದು 24 ಮಂದಿ ಮಾತ್ರವೇ ಮತದಾನ ಮಾಡಲಿಕ್ಕೆ ಅರ್ಹತೆ ಪಡೆದುಕೊಂಡಿದ್ದರು. ದಿನನಿತ್ಯ 450 ಲೀಟರ್ ಹಾಲು ಸರಬರಾಜು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ನಮ್ಮ ಉತ್ಪಾದಕರು ಉತ್ತಮ ಗುಣಮಟ್ಟದ ಜೊತೆಗೆ ಹೆಚ್ಚಿನ ಹಾಲು ಉತ್ಪಾದನೆ ಮಾಡಬೇಕು’ ಎಂದರು.

ಮುಖಂಡರಾದ ವೆಂಕಟರೆಡ್ಡಿ, ಕೆ.ದೇವರಾಜು, ಜಗನ್ನಾಥ್.ಎನ್, ಬಾಬು ಹಾಗೂ ಗ್ರಾಮಸ್ಥರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.